ಕಾಸರಗೋಡು, ಜ 13 (DaijiworldNews/SM): ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಉಪ್ಪಳ ನಿವಾಸಿ ಸೇರಿದಂತೆ ಮೂವರಿಂದ ಸುಮಾರು 1 ಕೋಟಿ ರೂ. ಗಳ ಚಿನ್ನಾಭರಣವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಉಪ್ಪಳದ ಮುಹಮ್ಮದ್ ಅಶ್ರಫ್, ಕೂತು ಪರಂಬದ ಬಷೀರ್ ಅಬ್ಬಾಸ್, ಕೋಜಿಕ್ಕೋಡ್ ನ ರಶೀದ್ ಬಂಧಿತರು. ಅಶ್ರಫ್ ಬಳಿಯಿಂದ 29. 78 ಲಕ್ಷ ರೂ. ಬಷೀರ್ ನಿಂದ 41 ಲಕ್ಷ ರೂ., ರಶೀದ್ ನಿಂದ 49.54 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಮುಹಮ್ಮದ್ ಅಶ್ರಫ್ ಬಹರೈನ್ ಮತ್ತು ಬಷೀರ್ ಹಾಗೂ ರಶೀದ್ ದುಬಾಯಿ ಯಿಂದ ಬಂದಿದ್ದರು. ಅಶ್ರಫ್ ದೇಹದೊಳಗೆ ಹಾಗೂ ಇತರ ಇಬ್ಬರು ಟ್ರಾಲಿ ಬ್ಯಾಗ್ ನಲ್ಲಿ ಬಚ್ಚಿಟ್ಟು ಚಿನ್ನಾಭರಣ ತಂದಿದ್ದರು.
ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಉಪ್ಪಳ ನಿವಾಸಿ ಸೇರಿದಂತೆ ಮೂವರಿಂದ ಸುಮಾರು 1 ಕೋಟಿ ರೂ.ಗಳ ಚಿನ್ನಾಭರಣವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಉಪ್ಪಳದ ಮುಹಮ್ಮದ್ ಅಶ್ರಫ್, ಕೂತು ಪರಂಬದ ಬಷೀರ್ ಅಬ್ಬಾಸ್, ಕೋಜಿಕ್ಕೋಡ್ ನ ರಶೀದ್ ಬಂಧಿತರು. ಅಶ್ರಫ್ ಬಳಿಯಿಂದ 29. 78 ಲಕ್ಷ ರೂ. ಬಷೀರ್ ನಿಂದ 41 ಲಕ್ಷ ರೂ, ರಶೀದ್ ನಿಂದ 49. 54 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.
ಮುಹಮ್ಮದ್ ಅಶ್ರಫ್ ಬಹರೈನ್ ಮತ್ತು ಬಷೀರ್ ಹಾಗೂ ರಶೀದ್ ದುಬಾಯಿ ಯಿಂದ ಬಂದಿದ್ದರು. ಅಶ್ರಫ್ ದೇಹದೊಳಗೆ ಹಾಗೂ ಇತರ ಇಬ್ಬರು ಟ್ರಾಲಿ ಬ್ಯಾಗ್ ನಲ್ಲಿ ಬಚ್ಚಿಟ್ಟು ಚಿನ್ನಾಭರಣ ತಂದಿದ್ದರು.