ನವದೆಹಲಿ, ಜ.13 (DaijiworldNews/PY): "ಕೊರೊನಾ ಲಸಿಕೆಯನ್ನು ಕೇಂದ್ರ ಸರ್ಕಾರ ಉಚಿತವಾಗಿ ನೀಡಬೇಕು" ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ.
"ಕೊರೊನಾ ಲಸಿಕೆಯನ್ನು ಕೇಂದ್ರ ಉಚಿತವಾಗಿ ನೀಡದಿದ್ದಲ್ಲಿ ದೆಹಲಿ ಸರ್ಕಾರವೇ ಉಚಿತವಾಗಿ ಕೊರೊನಾ ಲಸಿಕೆ ನೀಡಲಿದೆ. ಕೊರೊನಾ ಲಸಿಕೆ ಉಚಿತವಾಗಿ ನೀಡುವಂತೆ ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇನೆ" ಎಂದಿದ್ದಾರೆ.
ಕೊರೊನಾ ಕರ್ತವ್ಯದ ಸಂದರ್ಭ ಮೃತಪಟ್ಟಿರುವ ಸೇನಾನಿ ಡಾ. ಹೀತೇಶ್ ಗುಪ್ತಾ ಅವರ ಮನೆಗೆ ಅರವಿಂದ್ ಕೇಜ್ರಿವಾಲ್ ಅವರು ಭೇಟಿ ನೀಡಿದ್ದು, ಕುಟುಂಬದವರಿಗೆ ಸಾಂತ್ವಾನ ಹೇಳಿದ್ಧಾರೆ.
"ನಾವು ಕೊರೊನಾ ಸೇನಾನಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯೋಜನೆಯನ್ನು ಆರಂಭಿಸಿದ್ದೇವೆ. ಈ ಯೋಜನೆಯಡಿ ಕುಟುಂಬಕ್ಕೆ 1 ಕೋಟಿ.ರೂ.ಗಳ ಸಹಾಯವನ್ನು ನೀಡಲಾಗುವುದು. ಡಾ. ಹೀತೇಶ್ ಗುಪ್ತಾ ಪತ್ನಿ ಶಿಕ್ಷಿತರಾಗಿದ್ದು, ಕೂಡಲೇ ಅವರಿಗೆ ದೆಹಲಿ ಸರ್ಕಾರದಲ್ಲಿ ಉದ್ಯೋಗ ನೀಡಲಾಗುವುದು" ಎಂದಿದ್ದಾರೆ.