ಬೆಂಗಳೂರು, ಜ.13 (DaijiworldNews/PY): "ಮುಖ್ಯಮಂತ್ರಿಗಳು ಬ್ಲ್ಯಾಕ್ಮೇಲ್ಗೆ ಭಯಪಟ್ಟು ಮೂವರಿಗೆ ಸಚಿವ ಸ್ಥಾನ ನೀಡಿದ್ದಾರೆ" ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ಕೆಲವರು ಸಿಎಂ ಅವರಿಗೆ ಸಿಡಿ ತೋರಿಸಿ, ಹೆದರಿಸಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಕೆಲವು ಮಂದಿ ಅಪಾರ ಪ್ರಮಾಣದ ಹಣ ನೀಡಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳಿಗೆ ನೈತಿಕತೆ ಇದ್ದಲ್ಲಿ ಅವರು ರಾಜೀನಾಮೆ ನೀಡಲಿ" ಎಂದಿದ್ದಾರೆ.
"ಸಚಿವ ಸ್ಥಾನ ಪಡೆದ ಮೂವರು ಈ ಹಿಂದೆ ನನ್ನ ಬಳಿ ಬಂದು ಯಡಿಯೂರಪ್ಪ ಅವರನ್ನು ಕೆಳಗಿಳಿಸೋಣ ಎಂದು ಹೇಳಿದ್ದರು. ನಾವೆಲ್ಲರೈ ಸೇರಿ ಅವರನ್ನು ಕೆಳಕ್ಕಿಳಿಸೋಣ ಎಂದಿದ್ದರು. ಅಪಾರ ಪ್ರಮಾಣದ ಹಣ ಪಡೆದುಕೊಂಡು ಸಚಿವ ಸ್ಥಾನ ನೀಡಿದ್ದಾರೆ. ಇದರಿಂದಾಗಿ ಯಡಿಯೂರಪ್ಪ ಅವರು ಸಮಸ್ತ ಲಿಂಗಾಯುತ ವೀರಶೈವ ಸಮಾಜದ ಮರ್ಯಾದೆ ತೆಗೆದಿದ್ದಾರೆ" ಎಂದು ತಿಳಿಸಿದ್ದಾರೆ.
"ಸಂಕ್ರಮಣದ ಉತ್ತರಾಯಣ ಮುಖೇನ ಸಿಎಂ ಬಿಎಸ್ವೈ ಅವರ ಅಂತ್ಯ ಪ್ರಾರಂಭವಾಗಲಿದೆ" ಎಂದರು.