ಬೆಂಗಳೂರು, ಜ.13 (DaijiworldNews/PY): "ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನ ಮಾಡಿದ್ದೇನೆ" ಎಂದು ಸಚಿವ ಹೆಚ್.ನಾಗೇಶ್ ತಿಳಿಸಿದರು.
ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಚಿವ ಸಂಪುಟ ಸಭೆಯನ್ನು ಹೆಚ್.ನಾಗೇಶ್ ಅವರಿಗೆ ರಾಜೀನಾಮೆ ನೀಡಲು ಸೂಚನೆ ನೀಡಿದ್ದರು. ಈ ಬಗ್ಗೆ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರೂ ಕೂಡಾ ಸಿಎಂ ಬಿಎಸ್ವೈ ಅವರು ಆ ವಿಚಾರವನ್ನು ಕೇಳಲು ತಯಾರಿರಲಿಲ್ಲ.
ಸಚಿವ ಸಂಪುಟ ಸಭೆಯ ನಂತರ ಸಿಎಂ ಬಿಎಸ್ವೈ ಅವರನ್ನು ಭೇಟಿ ಮಾಡಿದ ಡಾ.ಕೆ. ಸುಧಾಕರ್, ನಾರಾಯಣಗೌಡ ಹಾಗೂ ಎಸ್.ಟಿ.ಸೋಮಶೇಖರ್, "ಹೆಚ್.ನಾಗೇಶ್ ಅವರಿಂದ ರಾಜೀನಾಮೆ ಕೇಳಿರುವುದು ಸರಿಯಲ್ಲ" ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜೀನಾಮೆ ನೀಡಿದರೆ, ಅದಕ್ಕೆ ಸಮನಾಂತರವಾದ ಹುದ್ದೆ ನೀಡುವುದಾಗಿ ಸಿಎಂ ಬಿಎಸ್ವೈ ಅವರು ಭರವಸೆ ನೀಡಿದ್ದು, ನಂತರ ನಾಗೇಶ್ ಅವರು ರಾಜೀನಾಮೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.