ಬೆಂಗಳೂರು, ಜ.13 (DaijiworldNews/PY): ಜ.14ರಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಯಲಚೇನಹಳ್ಳಿ ವಿಸ್ತರಿತ ಮಾರ್ಗದಲ್ಲಿನ ಮೆಟ್ರೊ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ವಿಮಾನ ನಿಲ್ದಾಣಕ್ಕೆ ರೈಲು ಸೇವೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದ ನಂತರ ಬೆಂಗಳೂರಿನಲ್ಲಿ ಪ್ರಯಾಣವನ್ನು ಸರಾಗೊಳಿಸುವತ್ತ ಇನ್ನೂ ಒಂದು ಹೆಜ್ಜೆ ಇರಿಸಿದ್ದು, ನಮ್ಮ ಮೆಟ್ರೋದ 6 ಕಿ.ಮೀ ಉದ್ದದ ಯಲಚೇನಹಳ್ಳಿಯಿಂದ ಹಸಿರು ಮಾರ್ಗದಲ್ಲಿನ ಮೆಟ್ರೊ ಸಂಚಾರಕ್ಕೆ ಜ.14ರಂದು ಚಾಲನೆ ನೀಡಲಾಗುವುದು" ಎಂದಿದ್ದಾರೆ.
ಕನಕಪುರ ರಸ್ತೆಯಲ್ಲಿನ 6.29 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಐದು ನಿಲ್ದಾಣಗಳು ಬರಲಿದ್ದು, ಎಲ್ಲಾ ನಿಲ್ದಾಣಗಳಲ್ಲೂ ಕೂಡಾ ಅಂತಿಮ ಸಿದ್ದತೆ ಭರದಿಂದ ನಡೆಯುತ್ತಿದೆ.