ಬೆಂಗಳೂರು, ಜ.13 (DaijiworldNews/PY): ಕೆಜಿಎಫ್-2 ಸಿನಿಮಾದ ಟೀಸರ್ನಲ್ಲಿ ಬಂದೂಕಿನಿಂದ ರಾಕಿಂಗ್ ಸ್ಟಾರ್ ಯಶ್ ಸಿಗರೇಟ್ ಹಚ್ಚುವ ದೃಶ್ಯಗಳು ಕಂಡುಬಂದ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆ ಯಶ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಯಶ್ ಅವರು ಕೆಜಿಎಫ್-2 ಟೀಸರ್ನಲ್ಲಿ ಬಂದೂಕಿನಿಂದ ಸಿಗರೇಟ್ ಹಚ್ಚುವ ದೃಶ್ಯವು ಸಾವಿರಾರು ಮಂದಿ ಮೋಡಿ ಮಾಡಿದೆ. ಟೀಸರ್ನಲ್ಲಿರುವ ಸಿಗರೇಟ್ ಸೇದುವ ದೃಶ್ಯವು ಯುವಕರನ್ನು ಪ್ರಚೋದಿಸುತ್ತದೆ. ಈ ಹಿನ್ನೆಲೆ ಈ ದೃಶ್ಯವನ್ನು ತೆಗೆಯುಂತೆ ಸೂಚನೆ ನೀಡಿ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ.
'ಧೂಮಪಾನ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಅಲ್ಲದೇ, ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗ ಕಾಯ್ದೆ 2003, ಸೆಕ್ಷನ್ 5ರ ಪ್ರಕಾರ ನಿಬಂಧನೆಗಳ ಉಲ್ಲಂಘನೆಯಾಗಿದೆ. ಯುವ ಸುಮದಾಯವು ಸಿಗರೇಟ್ ಸೇದುವ ಪ್ರಚೋದನೆಗೆ ಒಳಗಾಗುವ ಸಾಧ್ಯತೆಯೂ ಇದೆ. ಈ ಹಿನ್ನೆಲೆ ಸಾಮಾಜಿ ಜಾಲತಾಣದಲ್ಲಿರುವ ಟೀಸರ್ನಲ್ಲಿನ ಸಿಗರೇಟ್ ಸೇದುವ ದೃಶ್ಯವನ್ನು ತೆಗೆದುಹಾಕಿ' ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಆರೋಗ್ಯ ಸಚಿವ ಸುಧಾಕರ್ ಅವರು ನೋಟಿಸ್ ಸಂಬಂದ ಸ್ಪಷ್ಟನೆ ನೀಡಿದ್ದು, "ಈ ಬಗ್ಗೆ ಯಶ್ ಅವರಿಗೆ ನೀಡಿರುವುದು ನೋಟಿಸ್ ಅಲ್ಲ, ಬದಲಾಗಿ ಮನವಿಯಷ್ಟೇ" ಎಂದಿದ್ದಾರೆ.
"ಈ ವಿಚಾರ ಕೇವಲ ಯಶ್ ಅವರಿಗೆ ಮಾತ್ರವಲ್ಲ. ಎಲ್ಲಾ ನಟರಿಗೂ ಕೂಡಾ ಮನವಿ ಮಾಡಿಕೊಳ್ಳುತ್ತಿದ್ದು, ನಿಮ್ಮನ್ನು ಲಕ್ಷಾಂತರ ಅಭಿಮಾನಿಗಳು ಫಾಲೋ ಮಾಡುತ್ತಿರುತ್ತಾರೆ. ಹೀಗಿರುವಾಗ ಸಿಗರೇಟ್ ಸೇದುವ ದೃಶ್ಯ ತೋರಿಸಬಾರದು. ದೇಶದಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಸಿಗರೇಟು ಸೇದುವಂತೆ ದೃಶ್ಯಗಳನ್ನು ತೋರಿಸದೇ, ಜಾಗೃತಿ ಮೂಡಿಸಬೇಕು" ಎಂದು ತಿಳಿಸಿದ್ದಾರೆ.