ಮುಂಬೈ, ಜ.13 (DaijiworldNews/PY): ತಮ್ಮ ವಿರುದ್ದ ಕೇಳಿ ಬಂದಿರುವ ಅತ್ಯಾಚಾರದ ಆರೋಪವನ್ನು ಮಹಾರಾಷ್ಟ್ರ ಸಾಮಾಜಿಕ ಹಾಗೂ ನ್ಯಾಯ ಸಚಿವ ಧನಂಜಯ್ ಮುಂಡೆ ಅವರು ತಿರಸ್ಕರಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, "ತನ್ನ ಆರೋಪ ಮಾಡುತ್ತಿರುವ ಮಹಿಳೆ ಹಾಗೂ ಅವರ ಸಹೋದರಿ ನನಗೆ ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ. 2020ರ ನವೆಂಬರ್ ತಿಂಗಳಿನಲ್ಲೇ ನಾನು ಈ ವಿಚಾರದ ಬಗ್ಗೆ ನಾನು ಪೊಲೀಸರಿಗೆ ದೂರು ನೀಡಿದ್ದೆ" ಎಂದಿದ್ದಾರೆ.
"ನಾನು 2003ರ ತನಕಮೂ ಮಹಿಳೆಯೊಂದಿಗೆ ಸಂಪರ್ಕದಲ್ಲಿದೆ. ನಮಗೆ ಇಬ್ಬರು ಮಕ್ಕಳಿದ್ದಾರೆ. ನಮ್ಮಿಬ್ಬರ ಸಂಬಂಧವನ್ನು ಮನೆಯವರೂ ಕೂಡಾ ಒಪ್ಪಿದ್ದರು" ಎಂದು ಧನಂಜಯ್ ತಿಳಿಸಿದ್ದಾರೆ.
ಈ ಸಂಬಂಧ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಬಿಜೆಪಿ ಮಹಿಳಾ ಘಟಕದವರು ಪತ್ರ ಬರೆದಿದ್ದು, ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿದ್ದಾರೆ.
ಧನಂಜಯ್ ಮುಂಡೆ ಅವರ ವಿರುದ್ದ ಮಹಿಳೆಯೋರ್ವರು ಅತ್ಯಾಚಾರ ಆರೋಪದಡಿ ಆರೋಪ ಮಾಡಿದ್ದು, ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು. ಅಲ್ಲದೇ, ಶೀಘ್ರವೇ ಧನಂಜಯ್ ಮುಂಡೆ ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.