ಪಾಟ್ನಾ, ಜ.13 (DaijiworldNews/PY): ಇಂಡಿಗೊ ವಿಮಾನಯಾನ ಸಂಸ್ಥೆಯ ಪಾಟ್ನಾ ವಿಮಾನ ನಿಲ್ದಾಣ ವ್ಯವಸ್ಥಾಪಕರನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಜ.12ರ ಮಂಗಳವಾರದಂದು ನಡೆದಿದೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ಹೇಳಿಗೆ ನೀಡಿದ ಇಂಡಿಗೊ, "ನಮ್ಮ ಸಂಸ್ಥೆಯ ಪಾಟ್ನಾ ವಿಮಾನ ನಿಲ್ದಾಣದ ವ್ಯವಸ್ಥಾಪಕರನ್ನು ಗುಂಡಿಕ್ಕಿ ಹತ್ಯೆಗೈದ ಘಟನೆಯಿಂದ ನಮಗೆ ಬೇಸರವಾಗಿದೆ" ಎಂದು ತಿಳಿಸಿದೆ.
"ನಾವು ಅವರ ಕುಟುಂಬದ ಸಂಪರ್ಕದಲ್ಲಿದ್ದು, ಎಲ್ಲಾ ಅವಶ್ಯಕವಾದ ನೆರವು ನೀಡುತ್ತೇವೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು, ಇದಕ್ಕೆ ಸೂಕ್ತವಾಗಿ ಸಹಕರಿಸುತ್ತೇವೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.
"ಮಂಗಳವಾರ ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಮನೆಯ ಹೊರಗಿದ್ದ ಅಪರಿಚಿತರು ಅವರಿಗೆ ಹಲವು ಬಾರಿ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ" ಎಂದು ವಿಮಾನಯಾನ ಮೂಲಗಳು ತಿಳಿಸಿವೆ.