ಬೆಂಗಳೂರು, ಜ.13 (DaijiworldNews/PY): "ನನ್ನನ್ನು ಆರು ಬಾರಿ ಗೆಲ್ಲಿಸಿದ ಕ್ಷೇತ್ರದ ಜನತೆಗೆ ಕೃತಜ್ಞತೆಗಳು. ಯಾವುದೇ ಸಚಿವ ಸ್ಥಾನ ನೀಡಿದರೂ ಕೂಡಾ ನಾನು ನಿಭಾಯಿಸುತ್ತೇನೆ" ಎಂದು ಸುಳ್ಯ ಕ್ಷೇತ್ರದ ಶಾಸಕ, ಸಚಿವಾಕಾಂಕ್ಷಿ ಎಸ್.ಅಂಗಾರ ಹೇಳಿದ್ದಾರೆ.
"ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ಸ್ವತಃ ನನಗೆ ಕರೆ ಮಾಡಿದ್ದು, ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ. ನನಗೆ ಪಕ್ಷದ ವರಿಷ್ಠರು ಸೇರಿದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಆಗೂ ಎಲ್ಲಾ ನಾಯಕರು ಅವಕಾಶ ನೀಡಿದ್ದಾರೆ" ಎಂದಿದ್ದಾರೆ.
"ನನಗೆ ಯಾವ ಖೋಟಾದಲ್ಲಿಯೂ ಕೂಡಾ ಸಚಿವ ಸ್ಥಾನ ನೀಡಿಲ್ಲ. ಬದಲಾಗಿ ಪಕ್ಷ ಸಂಘಟನೆಯನ್ನು ಗುರುತಿಸಿ ನೀಡಿದ್ದಾರೆ. ನನಗೆ ಯಾವುದೇ ಸಚಿವ ಸ್ಥಾನ ನೀಡಿದರೂ ಕೂಡಾ ನಾನು ನಿಭಾಯಿಸುತ್ತೇನೆ. ನನ್ನನ್ನು ಆರು ಬಾರಿ ಗೆಲ್ಲಿಸಿದ ಕ್ಷೇತ್ರದ ಜನತೆಗೆ, ಸಿಎಂ ಬಿಎಸ್ವೈ ಹಾಗೂ ಸಂಘಟನೆಗೆ ನನ್ನ ಧನ್ಯವಾದಗಳು" ಎಂದು ಹೇಳಿದ್ದಾರೆ.
ರಾಜಭವನದಲ್ಲಿ ಇಂದು ಮೂರು ಗಂಟೆಗೆ ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರ ಅವರು ಪ್ರಮಾಣ ವಚನ ಸ್ವೀಕರಿಸುವುದು ನಿಶ್ಚಿತವಾಗಿದೆ.