ವಿಜಯಪುರ, ಜ. 13 (DaijiworldNews/MB) : ''ನನಗೆ ಮುಖ್ಯಮಂತ್ರಿ ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೆ ಬರ ಹೇಳಲು ಕರೆ ಮಾಡಿಲ್ಲ. ನನ್ನ ಕರೆನ್ಸಿ ಖಾಲಿಯಾಗಿದೆ'' ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ''ನನಗೆ ಮುಖ್ಯಮಂತ್ರಿ ಕರೆ ಮಾಡಿಲ್ಲ. ಅಷ್ಟಕ್ಕೂ ನನಗೆ ಬೆಂಗಳೂರಿನಲ್ಲಿ ಏನೂ ಕೆಲಸವಿಲ್ಲ, ಹಾಗಾಗಿ ನಾನು ಬೆಂಗಳೂರಿಗೆ ಹೋಗಲ್ಲ'' ಎಂದು ಕೂಡಾ ತಿಳಿಸಿದರು.
ತಮ್ಮ ಸರ್ಕಾರದ ವಿರುದ್ದವೇ ಕಳೆದ ಹಲವು ತಿಂಗಳುಗಳಿಂದ ವಾಗ್ದಾಳಿ ನಡೆಸುತ್ತಿದ್ದ ಅವರು, ಕಳೆದ ಒಂದು ದಿನದಿಂದ ಸರ್ಕಾರದ ವಿರುದ್ದದ ತಮ್ಮ ವಾಕ್ ಪ್ರಹಾರವನ್ನು ನಿಲ್ಲಿಸಿದ್ದಾರೆ. ಸೋಮವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲೂ ನಿರಾಕರಿಸಿದ್ದು, ''ಮಾಧ್ಯಮದ ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ನನಗೆ ಕರೆ ಮಾಡಿಲ್ಲ, ನನ್ನ ಕರೆನ್ಸಿ ಖಾಲಿಯಾಗಿದೆ'' ಎಂದು ಹೇಳಿದ್ದಾರೆ.