ಉಡುಪಿ, ಜ 12 (DaijiworldNews/SM): ಕೋವಿಡ್ ಲಸಿಕೆ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ದುರ್ದೈವವಾಗಿದೆ. ನಮ್ಮ ದೇಶದಲ್ಲಿ ತಯಾರಾದ ಔಷಧಿಯ ಬಗ್ಗೆ ಅಪಪ್ರಚಾರ ಮಾಡುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಅಪಪ್ರಚಾರದಲ್ಲಿ ಕೆಲ ಪಕ್ಷಗಳು ತೊಡಗಿಸಿಕೊಂಡಿರುವುದು ದುರ್ದೈವ ಎಂದಿದ್ದಾರೆ. ತಾವು ಮಾಡೋದಿಲ್ಲ ಹಾಗೂ ಮಾಡುವವರಿಗೂ ಬಿಡುವುದಿಲ್ಲ. ಈ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು. ಹೀಗೆ ಮಾಡುವ ಪಕ್ಷವನ್ನು ಜನ ದೇಶದ ರಾಜಕಾರಣದಿಂದ ಅಳಿಸಿ ಹಾಕುತ್ತಾರೆ ಎಂದರು.
ಇನ್ನು ಲಸಿಕೆ ಇಟಲಿ ಅಥವಾ ಚೀನಾದಿಂದ ಬಂದರೆ ಮಾತ್ರ ಒಳ್ಳೆದು ಅಂತಾರೆ. ಆದರೆ ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆದರೆ, ವಿರೋಧ ಪಕ್ಷದವರಿಗೆ ನಮ್ಮ ದೇಶದಲ್ಲಿ ತಯಾರಾದ ಲಸಿಕೆಯ ಬಗ್ಗೆ ಅವರಿಗೆ ನಂಬಿಕೆ ಇಲ್ಲ. ಈ ದೇಶದ ಜನರ ಓಟು ಬೇಕು. ದೇಶದಲ್ಲಿ ತಯಾರಾದ ಔಷಧಿ ಬಗ್ಗೆ ನಂಬಿಕೆ ಇಲ್ಲ. ಇಟಲಿಯಿಂದ ಬಂದಿದ್ದರೆ ಬಹಳ ಒಳ್ಳೇದು ಅಂತಿದ್ರು. ನಮ್ಮ ದೇಶದ ವಿಜ್ಞಾನಿಗಳ ಬಗ್ಗೆಯೂ ಅವರಿಗೆ ಗೌರವ ಇದ್ದಂತಿಲ್ಲ ಎಂದು ವಿಪಕ್ಷಗಳ ಟೀಕೆಗೆ ಸಿಟಿ ರವಿಯವರು ಉತ್ತರಿಸಿದರು.