ಮಂಗಳೂರು, ಜ 12 (DaijiworldNews/SM): ಮಂಗಳೂರಿನ ಬೀಚ್ ಗಳಲ್ಲಿ ನಗರದ ನೂತನ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ತಡರಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದು, ಈ ಬಗ್ಗೆ ಅಪಪ್ರಚಾರ ಕೇಳಿಬಂದಿದೆ. ಅಪಸ್ವರಗಳಿಗೆ ಸ್ಪಷ್ಟನೆ ನೀಡುತ್ತೇನೆ. ಆದರೆ, ಕಾರ್ಯಾಚರಣೆ ಸ್ಥಗಿತಗೊಳಿಸುವುದಿಲ್ಲ ಎಂದು ನಗರದ ನೂತನ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾತ್ರಿ ಹೊತ್ತಲ್ಲಿ ಬೀಚ್ ಗಳಲ್ಲಿ ಮದ್ಯಪಾನ ಮಾಡೋದು ಎಷ್ಟು ಸರಿ? ಯುವಕ-ಯುವತಿಯರು ತಡರಾತ್ರಿಯಲ್ಲಿ ಒಬ್ಬೊಬ್ಬರಾಗಿ ಕೂತ್ಕೊಳ್ಳೋದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದ್ದಾರೆ. ಯುವಕ-ಯುವತಿಯರು ಒಬ್ಬೊಬ್ಬರಾಗಿ ಬೀಚ್ ಗಳಲ್ಲಿ ಕೂತ ಸಂದರ್ಭ ಅವರಿಗೆ ಕಿಡಿಗೇಡಿಗಳಿಂದ ತೊಂದರೆ ಆದರೆ ಇಡೀ ಮಂಗಳೂರು ತಲೆತಗ್ಗಿಸು ಘಟನೆ ನಡೆದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯಬಾರದೆನ್ನುವ ಉದ್ದೇಶದಿಂದಷ್ಟೇ ಬೀಚ್ ಗಳಲ್ಲಿ ತಡರಾತ್ರಿ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದೇವೆ ಎಂದರು.
ಇನ್ನು ಪೊಲೀಸರ ಮೇಲೆ ಹಲ್ಲೆ ನಡೆಸುವ ಯಾವುದೇ ಕಿಡಿಗೇಡಿಗಳಿದ್ದರೂ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳೋದಾಗಿ ಎಚ್ಚರಿಸಿದರು.