ಉಡುಪಿ, ಜ 12 (DaijiworldNews/SM): ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದವರ ಸೊಕ್ಕು ಮುರೀಯುತ್ತೇವೆ ಎಂದು ಸಚಿವ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಎಲ್ಲಾ ಮುಸಲ್ಮಾನರು ದೇಶದ್ರೋಹಿಗಳಲ್ಲ, ಹಲವಾರು ಮಂದಿ ದೇಶಭಕ್ತರೂ ಇದ್ದಾರೆ. ಮುಸಲ್ಮಾನರ ಓಟು ಬೇಡ ಎಂದು ಹೇಳಿಲ್ಲ. ರಾಷ್ಟ್ರ ಭಕ್ತರೆಲ್ಲರೂ ಬಿಜೆಪಿಯವರೇ. ಆದರೆ ಕಾಂಗ್ರೆಸ್ ನಾಯಕರು ಮುಸ್ಲಿಂ ಸಮುದಾಯವನ್ನು ಒಲೈಸುವಲ್ಲಿ ನಿರತವಾಗಿದೆ. ಅವರೆಲ್ಲರೂ ಕಾಂಗ್ರೆಸ್ ಗೆ ಮತ ಹಾಕ್ತಾರೆ ಎನ್ನುವ ಭ್ರಮೆಯಲ್ಲಿದ್ದಾರೆ ಎಂದರು.
ಕಾಂಗ್ರೆಸ್ ಅವರ ಮನೋಭಾವನೆಯನ್ನು ಬದಲಾಯಿಸಿಕೊಳ್ಳಬೇಕು. ರಾಜಕೀಯ ಪರಿಜ್ಞಾನವಿಲ್ಲದ ವಿರೋಧ ಪಕ್ಷ ಈ ರಾಜ್ಯದಲ್ಲಿದೆ. ಎಲ್ಲಿ ರಾಜಕೀಯ ಮಾಡಬೇಕೂಂತಲೇ ಗೊತ್ತಿಲ್ಲ. ಅದಕ್ಕೆಲ್ಲ ಏನೂ ಮಾಡೋಕ್ಕಾಗಲ್ಲ ಎಂದರು. ಲಸಿಕೆ ಪೂರೈಕೆ ರಾಜ್ಯದಲ್ಲಿ ವ್ಯವಸ್ಥಿತವಾಗಿ ನಡೆಯುತ್ತದೆ. ಕಾಂಗ್ರೆಸ್ ನವರ ಸಹಕಾರ ಕೋರುತ್ತೇವೆ. ಸಹಕಾರ ಕೊಟ್ರೆ ಸಂತೋಷ, ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಕಕ್ಕಿಟ್ಟು ಕೆಲಸ ಮುಂದುವರೀಸುತ್ತೇವೆ ಎಂದು ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.