ಬೆಂಗಳೂರು, ಜ.12 (DaijiworldNews/HR): ಪ್ರಕರಣವೊಂದರಲ್ಲಿ ಎಫ್ಐಆರ್ ದಾಖಲಿಸುವುದಕ್ಕೆ ದೂರುದಾರರಿಂದ 1 ಲಕ್ಷ ಲಂಚ ಪಡೆಯುತ್ತಿದ್ದ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸೌಮ್ಯಾ ಮತ್ತು ಹೆಡ್ ಕಾನ್ ಸ್ಟೆಬಲ್ ಜೆ.ಪಿ. ರೆಡ್ಡಿ ಎಂಬುವವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿರುವ ಘಟನೆ ನಡೆದಿದೆ.
ಪೊಲೀಸ್ ಠಾಣೆಯಲ್ಲೇ ಲಂಚದ ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿದ್ದು, ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಪಿಎಸ್ಐ ಸೌಮ್ಯಾ ಲಂಚದ ಹಣ ಪಡೆಯುತ್ತಿದ್ದ ಸಂಧರ್ಭದಲ್ಲಿ ಎಸಿಬಿ ಅಧಿಕಾರಿಗಳು ಠಾಣೆಗೆ ದಾಳಿ ನಡೆಸಿದ್ದು, ಆಗ ಇನ್ನೊಬ್ಬ ಆರೋಪಿ ಜೆ.ಪಿ. ರೆಡ್ಡಿ ಸೇರಿದಂತೆ ಕೆಲವು ಕಾನ್ಸ್ಟೆಬಲ್ ಗಳು ಠಾಣೆಯಲ್ಲಿದ್ದರು. ಒಬ್ಬರು ಭಯದಿಂದ ಓಡಿಹೋಗಲು ಯತ್ನಿಸಿ ಜಾರಿ ಬಿದ್ದಿದ್ದು ಅವರ ಕಾಲಿಗೆ ಪೆಟ್ಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.