ನವದೆಹಲಿ,ಜ.12 (DaijiworldNews/HR): ವಂಶ ಪಾರಂಪರ್ಯವಾಗಿ ನಡೆಯುವ ರಾಜಕಾರಣ ಪ್ರಜಾಪ್ರಭುತ್ವದ ಶತ್ರುವಾಗಿದ್ದು, ಇಂತಹ ರಾಜಕಾರಣವನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ರಾಷ್ಟ್ರೀಯ ಯುವ ಸಂಸತ್ ಉತ್ಸವದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, "ತಮ್ಮ ವಂಶದ ಅಡ್ಡಹೆಸರಿನ ಆಧಾರದ ಮೇಲೆ ಚುನಾವಣೆಯಲ್ಲಿ ಗೆಲ್ಲುತ್ತಿದ್ದವರ ಸಂಖ್ಯೆ ಈಗ ಕ್ಷೀಣಿಸುತ್ತಿದ್ದು, ಕುಟುಂಬವನ್ನು ರಕ್ಷಿಸುವ ನಿಟ್ಟಿನಲ್ಲಿ ಕೆಲವರು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುತ್ತಾರೆ. ರಾಜಕೀಯವನ್ನು ಕಾಯಿಲೆಯಿಂತೆ ಕಾಡುತ್ತಿರುವ ವಂಶಪಾರಂಪರ್ಯ ರಾಜಕಾರಣವನ್ನು ಸಂಪೂರ್ಣ ನಿರ್ಮೂಲನೆ ಮಾಡುವುದು ಅಗತ್ಯ" ಎಂದರು.
ಇನ್ನು "ಯುವಜನತೆ ರಾಜಕೀಯ ಪ್ರವೇಶಿಸುವುದು ಅಗತ್ಯವಿದ್ದು, ಒಂದು ವೇಳೆ ಯುವಜನತೆ ರಾಜಕೀಯಕ್ಕೆ ಧುಮುಕದೇ ಇದ್ದಲ್ಲಿ ವಂಶಪಾರಂಪರ್ಯ ರಾಜಕಾರಣ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವುದನ್ನು ಮುಂದುವರಿಸುತ್ತದೆ" ಎಂದು ಹೇಳಿದ್ದಾರೆ.