ನವದೆಹಲಿ,ಜ.12 (DaijiworldNews/HR): "ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ಈ ವರ್ಷ ನಮೋ ಆ್ಯಪ್ನಲ್ಲಿ ವಿವೇಕಾನಂದರ ಆಲೋಚನೆಗಳು, ತತ್ವ ಸಿದ್ಧಾಂತಗಳನ್ನು ಹಂಚಿಕೊಳ್ಳುತ್ತಿದ್ದೇವೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ವಿವೇಕಾನಂದರ ಚಿಂತನೆಗಳನ್ನು ಒಳಗೊಂಡಿರುವ ನಮೊ ಆ್ಯಪ್ನ ಲಿಂಕನ್ನು ಹಂಚಿಕೊಂಡಿದ್ದಾರೆ.
ಇನ್ನು "ಈ ಬಾರಿ ವಿವೇಕಾನಂದರ ಜನ್ಮದಿನದ ನೆನಪಿನಲ್ಲಿ ನಮೋ ಆ್ಯಪ್ ಮೂಲಕ ಅವರ ಕ್ರಿಯಾತ್ಮಕ ಆಲೋಚನೆಗಳು ಮತ್ತು ಆದರ್ಶಗಳನ್ನು ಪ್ರಪಂಚಾದಾದ್ಯಂತ ಹಂಚೋಣ" ಎಂದು ಕರೆ ನೀಡಿದ್ದಾರೆ.