ನವದೆಹಲಿ,ಜ.12 (DaijiworldNews/HR): ಸಿಡ್ನಿಯಲ್ಲಿ ಸೋಮವಾರ ನಡೆದ ಐದನೇ ದಿನದಾಟದಲ್ಲಿ ಭಾರತ ತಂಡ ಟೆಸ್ಟ್ ಡ್ರಾ ಮಾಡಿಕೊಂಡಿದ್ದು, ಈ ಪಂದ್ಯದಲ್ಲಿ ಸುದೀರ್ಘ ಓವರ್ ಎದುರಿಸಿದ ಹನುಮ ವಿಹಾರಿ ಕ್ರಿಕೆಟ್ ಅನ್ನು ಕೊಲೆ ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ನಲ್ಲಿ ಗೆಲುವಿನ ಅವಕಾಶವಿದ್ದರೂ, ಹನುಮ ವಿಹಾರಿ ಕ್ರಿಕೆಟ್ನ ಕೊಲೆ ಮಾಡಿದ್ದು, 109 ಎಸೆತ ಎದುರಿಸಿ ಕೇವಲ 7 ರನ್ ಗಳಿಸಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ.
ಇನ್ನು ಸಂಸದ ಬಾಬುಲ್ ಸುಪ್ರಿಯೊ ಮಾಡಿರುವ ಟ್ವೀಟ್ ಬಗ್ಗೆ ಟ್ವೀಟಿಗರು ಅಸಮಾಧಾನ ವ್ಯಕ್ತಪಡಿಸಿದ್ದು, ಹನುಮ ವಿಹಾರಿ ಮತ್ತು ಟೆಸ್ಟ್ ಪಂದ್ಯದ ಕುರಿತು ಏನೂ ಅರಿಯದ ನೀವು ದಯವಿಟ್ಟು ರಾಜಕೀಯದಲ್ಲೇ ಇರಿ" ಎಂದು ಸಲಹೆ ನೀಡಿದ್ದಾರೆ.