ರಾಮನಗರ, ಜ. 12 (DaijiworldNews/MB) : ''ವಿಧಾನಸಭೆ ಚುನಾವಣೆಗೆ ನಾನು ರಾಮನಗರ ಕ್ಷೇತ್ರದ ಅಭ್ಯರ್ಥಿಯಲ್ಲ'' ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.
ಕಾರ್ಯಕ್ರಮವೊಂದರಲ್ಲಿ ನಿರೂಪಕರು, ''ಭಾವಿ ಶಾಸಕರಾದ ನಿಖಿಲ್ ಮಾತನಾಡಬೇಕು'' ಎಂದು ಹೇಳಿದ ಸಂದರ್ಭ ಈ ಸ್ಪಷ್ಟನೆಯನ್ನು ಅವರು ನೀಡಿದರು.
''ನಾನು ಯಾವುದೇ ರಾಜಕೀಯ ಅಧಿಕಾರದ ಸಲುವಾಗಿ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ನಾನು ರಾಮನಗರ ಕ್ಷೇತ್ರದ ಅಭ್ಯರ್ಥಿಯಲ್ಲ. ತಾತ ದೇವೇಗೌಡರು, ತಂದೆ ಕುಮಾರಸ್ವಾಮಿ, ತಾಯಿ ಅನಿತಾರಿಗೆ ರಾಜಕೀಯ ನೆಲೆ ಕೊಟ್ಟ ಕ್ಷೇತ್ರ ಇದಾಗಿದ್ದು ಈ ಹಿನ್ನೆಲೆ ಇಲ್ಲಿನ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುವುದು ನನ್ನ ಕರ್ತವ್ಯ'' ಎಂದು ಹೇಳಿದರು.
''ಕಾರ್ಯಕರ್ತರು ಈ ವಿಚಾರವಾಗಿ ಗೊಂದಲ ಸೃಷ್ಟಿಸಬಾರದು'' ಎಂದು ಕೂಡಾ ಇದೇ ವೇಳೆ ಮನವಿ ಮಾಡಿದರು.