ಹೊಸದಿಲ್ಲಿ, ಜ.12 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ಸಾವಿರಾರು ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ರ್ಯಾಲಿಗೆ ತಡೆ ನೀಡುವಂತೆ ಕೇಂದ್ರ ಸರಕಾರ ಸುಪ್ರೀಂಕೋರ್ಟ್ಗೆ ಮನವಿ ಮಾಡಿದೆ.
ಗಣರಾಜ್ಯೋತ್ಸವ ಪರೇಡ್ಗೆ ಪ್ರತಿಯಾಗಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸುವುದಾಗಿ ರೈತರು ಘೋಷಿಸಿದ್ದು, ಹರ್ಯಾಣ ರೈತರು ಕೂಡಾ ಟ್ರ್ಯಾಕ್ಟರ್ ರ್ಯಾಲಿಗೆ ನಿರ್ಧರಿಸಿದ್ದು, ಪ್ರತಿ ಗ್ರಾಮದಿಂದ ಒಂದು ಟ್ರ್ಯಾಕ್ಟರ್ ಈ ರ್ಯಾಲಿಯಲ್ಲಿ ಭಾಗವಹಿಸಲಿದೆ ಎಂದು ರೈತರು ತಿಳಿಸಿದ್ದರು.
ಇನ್ನು ಜನವರಿ 23ರಂದು ರಿಹರ್ಸಲ್, ಜನವರಿ 28ರಂದು ನಡೆಯುವ ಎನ್ಸಿಸಿ ರ್ಯಾಲಿ, 29ರಂದು ನಡೆಯುವ ಬೀಟಿಂಗ್ ದ ರಿಟ್ರೀಟ್ ಹಾಗೂ ಜನವರಿ 30ರಂದು ನಡೆಯುವ ಹುತಾತ್ಮರ ದಿನದಂಥ ಸಮಾರಂಭವನ್ನು ಕೇಂದ್ರ ಸರಕಾರ ಉಲ್ಲೇಖಿಸಿದ್ದು, ಇವುಗಳಿಗೆ ಯಾವುದೇ ತಡೆ ಉಂಟಾದಲ್ಲಿ ದೇಶಕ್ಕೆ ದೊಡ್ಡ ಮುಜುಗರವಾಗಲಿದೆ ಎಂದು ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಿದೆ.