ಅಂಕೋಲ, ಜ 11 (DaijiworldNews/SM): ಅಂಕೋಲಾ ತಾಲ್ಲೂಕಿನ ಹೊಸಕಂಬಿ ಗ್ರಾಮದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆಯುಷ್ ಸಚಿವ ಶ್ರೀಪಾಡ್ ನಾಯಕ್ ಅವರ ಪತ್ನಿ ಮತ್ತು ಅವರ ಆಪ್ತ ಸಹಾಯಕ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ವೇಳೆ ನಡೆದಿದೆ.
ಕಾರು ಯೆಲ್ಲಾಪುರದಿಂದ ಗೋಕರ್ಣಕ್ಕೆ ತೆರಳುತ್ತಿದ್ದಾಗ ಹೊಸಕಂಬಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಉರುಳಿಬಿದ್ದಿದೆ. ಘಟನೆಯಲ್ಲಿ ನಾಯಕ್ ಅವರ ಪತ್ನಿ ವಿಜಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಂಪತಿಗಳು ಇತ್ತೀಚೆಗೆ ಉಡುಪಿ ಮತ್ತು ಕೊಲ್ಲೂರು ಕ್ಷೇತ್ರಗಳಿಗೆ ಭೇಟಿ ನೀಡಿದ್ದರು. ಅಪಘಾತದಲ್ಲಿ ಸಚಿವ ಶ್ರೀಪಾದ್ ನಾಯಕ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ, ನಾಯಕ್ ಗಂಭೀರ ಸ್ಥಿತಿಯಲ್ಲಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.
ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.