ನಾಸಿಕ್,ಜ.11 (DaijiworldNews/HR): 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದಿದೆ.
ಬಾಲಕಿಯ ಪೋಷಕರು ಕೆಲಸದಿಂದ ಮನೆಗೆ ವಾಪಾಸು ಬಂದಾಗ ಮಗಳು ಮನೆಯಲ್ಲಿ ಇರದಿರುವುದನ್ನು ಕಂಡು ಹುಡುಕಾಟ ನಡೆಸುತ್ತಿರುವಾಗ ಸಮೀಪದ ಕಟ್ಟಡವೊಂದರ ಟೆರೇಸ್ ಮೇಲೆ ಆಕೆ ಅಳುತ್ತಾ ಕೂತಿದ್ದಳು. ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಪ್ರಕರಣ ಸಂಬಂಧ ಬಾಲಕ ಸೇರಿ 19 ರಿಂದ 29 ವರ್ಷದ ಐವರು ಯುವಕರು ಮತ್ತು ಅವರಿಗೆ ಸಹಾಯ ಮಾಡಿದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.