ಲಖನೌ, ಜ.11 (DaijiworldNews/HR): ಆಮ್ ಅದ್ಮಿ ಪಕ್ಷದ(ಎಎಪಿ) ಶಾಸಕ ಸೋಮನಾಥ್ ಭಾರ್ತಿ ಅವರು ಉತ್ತರ ಪ್ರದೇಶದ ಆಸ್ಪತ್ರೆಗಳ ಸ್ಥಿತಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು ಇಂದು ಅವರನ್ನು ಸೆಕ್ಷನ್ 151ರ ಅಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸೋಮನಾಥ್ ಭಾರ್ತಿಯವರು ಅಮೆಥಿ ಮತ್ತು ರಾಯಬರೇಲಿ ಪ್ರವಾಸದಲ್ಲಿದ್ದ ಸಂಧರ್ಭದಲ್ಲಿ ಉತ್ತರ ಪ್ರದೇಶ ಆಸ್ಪತ್ರೆಗಳ ಅವ್ಯವಸ್ಥೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ಅವರನ್ನು ಇಂದು ಅಮೆಥಿ ಅತಿಥಿ ಗೃಹದಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸೋಮನಾಥ್ ಭಾರ್ತಿ, ಪೊಲೀಸರ ಸಮ್ಮುಖದಲ್ಲೇ ನನ್ನ ಮೇಲೆ ಮಸಿ ಎರಚಲಾಗಿದ್ದು, ಇದು ಬಿಜೆಪಿ ಕಾರ್ಯಕರ್ತರ ಕೈವಾಡ ಎಂದು ಆರೋಪಿಸಿದ್ದು, ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ" ಎಂದು ಹೇಳಿದ್ದಾರೆ.