ಬೆಳಗಾವಿ,ಜ.11 (DaijiworldNews/HR): ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ, ಯಡಿಯೂರಪ್ಪ ಅವರು ಅಧಿಕಾರದ ಅವಧಿ ಪೂರೈಸಲಿದ್ದಾರೆ ಎಂದು ಸಚಿವ ಅರೆಬೈಲ್ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿ ಬದಲಾವಣೆ ಸತ್ಯಕ್ಕೆ ದೂರವಾದುದು, ಅದನ್ನು ಪಕ್ಷದ ವರಿಷ್ಠರೇ ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಆ ವಿಷಯದಲ್ಲಿ ಪದೇ ಪದೇ ಮಾತನಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಕನಸು ಬಿದ್ದಿರಬಹುದು. ಅವರನ್ನೇ ವಿಚಾರಿಸಿ" ಎಂದರು.
ಇನ್ನು "ಸಂಪುಟ ವಿಸ್ತರಣೆ ನಿರ್ಣಯ ಸಿಎಂಗೆ ಬಿಟ್ಟಿದ್ದು, ಕೊಟ್ಟ ಮಾತು ಉಳಿಸಿಕೊಳ್ಳುವುದಕ್ಕೆ ಹೆಸರಾದವರು. ವರಿಷ್ಠರ ನಿರ್ದೇಶನದಂತೆ ಕ್ರಮ ಕೈಗೊಳ್ಳುತ್ತಾರೆ. ಸಚಿವರಾಗಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು ಸಾಮಾನ್ಯ. ವಿಸ್ತರಣೆ ವೇಳೆ ಬೇಡಿಕೆಗಳೂ ಕೇಳಿಬರುತ್ತವೆ. ಅದೆಲ್ಲವನ್ನೂ ನಿಭಾಯಿಸುವ ಅನುಭವ ಮುಖ್ಯಮಂತ್ರಿಗಿದೆ" ಎಂದು ಹೇಳಿದ್ದಾರೆ.