ಮೈಸೂರು, ಜ.11 (DaijiworldNews/PY): "ನಾನು ಯಾವಾಗ ಅಧಿಕಾರದಿಂದ ಕೆಳಗಿಳಿಯುತ್ತೇನೆ ಎನ್ನುವುದನ್ನು ಸಿದ್ದರಾಮಯ್ಯ ಅವರೇ ಹೇಳಲಿ" ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸುತ್ತೂರಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಧಿಕಾರದಿಂದ ನಾನು ಯಾವಾಗ ಕೆಳಗಿಳಿಯುತ್ತೇನೆ ಎನ್ನುವುದನ್ನು ಸಿದ್ದರಾಮಯ್ಯ ಅವರು ಹೇಳಲಿ. ನೀವು ಹಾಗೂ ಅವರು ಕುಳಿತು ದಿನಾಂಕ ನಿಗದಿ ಮಾಡಿ" ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಜ.13 ಅಥವಾ 14ಕ್ಕೆ ಸಚಿವ ಸಂಪುಟ ವಿಸ್ತರಣೆಯಾಗುವುದು ಖಚಿತ. ಅದು ಪುನರ್ರಚನೆಯೋ ಅಥವಾ ವಿಸ್ತರಣೆಯೋ ಎನ್ನುವುದು ಆ ದಿನ ತಿಳಿಯಲಿದೆ. ಜ.13ರ ಮಧ್ಯಾಹ್ನ ಅಮವಾಸ್ಯೆ ಕಳೆಯುತ್ತದೆ. ಬಳಿಕ ಒಳ್ಳೆಯ ಸಮಯವಿದೆ. ಬಿಜೆಪಿ ಪಕ್ಷದ ಅಧ್ಯಕ್ಷರಿಂದ ಸಮಯ ಕೇಳಿ ನಿಮಗೂ ಕೂಡಾ ತಿಳಿಸುತ್ತೇನೆ" ಎಂದು ಹೇಳಿದರು.