ಬೆಂಗಳೂರು,ಜ.11 (DaijiworldNews/HR): ಏರ್ ಇಂಡಿಯಾದ ನಾಲ್ವರು ಮಹಿಳಾ ಪೈಲಟ್ಗಳು ಸ್ಯಾನ್ ಫ್ರಾನ್ಸಿಸ್ಕೊ- ಬೆಂಗಳೂರು ನಡುವಣ ವಿಶ್ವದ ಅತೀ ದೀರ್ಘ ವಾಯು ಮಾರ್ಗದ ವಿಮಾನಯಾನವನ್ನು ಸಂಪೂರ್ಣವಾಗಿ ನಿರ್ವಹಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಮಹಿಳಾ ಪೈಲಟ್ಗಳನ್ನು ಕ್ಯಾಪ್ಟನ್ ಜೋಯಾ ಅಗರ್ವಾಲ್, ಕ್ಯಾಪ್ಟನ್ ಪಾಪಗರಿ ತನ್ಮೈ, ಕ್ಯಾಪ್ಟನ್ ಆಕಾಶಾ ಸೋನಾವೇರ್ ಮತ್ತು ಕ್ಯಾಪ್ಟನ್ ಶಿವಾನಿ ಮನ್ಹಾಸ್ ಎಂದು ಗುರುತಿಸಲಾಗಿದೆ.
ಇನ್ನು ಈ ಮಹಿಳಾ ಪೈಲಟ್ಗಳ ನಿರ್ವಹಣೆಯ ವಿಮಾನವು ಉತ್ತರ ಧ್ರುವದ ಮೇಲೆ ಹಾರಿ, ಅಟ್ಲಾಂಟಿಕ್ ಮಾರ್ಗದ ಮೂಲಕ, 16,000 ಕಿ.ಮೀ ದೂರವನ್ನು ಕ್ರಮಿಸಿ ಬೆಂಗಳೂರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
ಈ ಕುರಿತು ಸಂತಸ ವ್ಯಕ್ತಪಡಿಸಿದ ಪೈಲಟ್ ಶಿವಾನಿ ಮನ್ಹಾಸ್, ಇದು ಹಿಂದೆಂದೂ ನಡೆಯದೇ ಇದ್ದ ವಿದ್ಯಮಾನ. ಈ ಸಾಹಸ ರೋಮಾಂಚಕಾರಿ ಅನುಭವ ನೀಡಿದ್ದು, ಸ್ಯಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಬರಲು ಸುಮಾರು 17 ಗಂಟೆಗಳು ಬೇಕಾಯಿತು" ಎಂದು ಹೇಳಿದ್ದಾರೆ.