ಹುಬ್ಬಳ್ಳಿ, ಜ.11 (DaijiworldNews/HR): ದೇಶದ ಬೆಳವಣಿಗೆಗೆ ಆರ್ಎಸ್ಎಸ್ ಕೊಡುಗೆ ಏನೂ ಇಲ್ಲ, ಜೊತೆಗೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೂಡ ಬಿಜೆಪಿ ಹೋರಾಡಿಲ್ಲ, ಹೀಗಿದ್ದರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್ಗೆ ಹೋರಾಟದ ಪಾಠ ಹೇಳುತ್ತಾರೆಯೇ?' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಒಂದು ಕೊಠಡಿಯೊಳಗೆ ಇಬ್ಬರು ಹೋದರೆ ಕಾಂಗ್ರೆಸ್ನಿಂದ ಒಬ್ಬ ನಾಯಕ ಹುಟ್ಟುತ್ತಾನೆ ಎಂಬ ಪ್ರಲ್ಹಾದ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಹೋರಾಟ ಕಾಂಗ್ರೆಸ್ಗೆ ರಕ್ತಗತವಾಗಿ ಬಂದಿದ್ದು, ಹೋರಾಟ ಮಾಡದೆ ಅಧಿಕಾರಕ್ಕೆ ಬಂದ ಪಕ್ಷ ಬಿಜೆಪಿ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಿಜೆಪಿಯಿಂದ ಯಾರಾದರೂ ಜೀವ ಕಳೆದುಕೊಂಡಿದ್ದಾರೆಯೇ?" ಎಂದರು.
ಇನ್ನು "ಪ್ರಲ್ಹಾದ ಜೋಶಿ ಅವರು ಸ್ವಾತಂತ್ರ್ಯ ಸಂದರ್ಭದಲ್ಲಿ ಹುಟ್ಟಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಕಾಂಗ್ರೆಸ್ಗೆ ಹೋರಾಟದ ಬಗ್ಗೆ ಹೇಳುತ್ತಾರೆ" ಎಂದು ತಿರುಗೇಟು ನೀಡಿದ್ದಾರೆ.