ಯಲಹಂಕ, ಜ.11 (DaijiworldNews/HR): ಹಿರಿಯ ಸಂಗೀತ ನಿರ್ದೇಶಕ ಆರ್.ರತ್ನಂ(97) ಅವರು ಚೆನ್ನೈನಲ್ಲಿ ನಿಧನರಾಗಿದ್ದಾರೆಂದು ತಿಳಿದು ಬಂದಿದೆ.
ರತ್ನಂ ಅವರು ಕಪ್ಪು ಬಿಳುಪು, ಭಲೇ ಜೋಡಿ, ಚದುರಂಗ, ಮನೆಕಟ್ಟಿ ನೋಡು, ಹೊಯ್ಸಳ, ಮಹಾತಪಸ್ವಿ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಿಗೆ ಸಂಗೀತ ನೀಡಿದ್ದರು.
ಇನ್ನು ರತ್ನಂ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಸಾಗರ್ ಪ್ರಶಸ್ತಿ, ಅಪ್ಪಾಜಿಗೌಡ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ದೊರಕಿದೆ.
ರತ್ನಂ ಅವರ ಕೊನೆಯ ಆಸೆಯಂತೆ ಅಂತ್ಯಸಂಸ್ಕಾರವನ್ನು ಹೆಬ್ಬಾಳದ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.