ಕೋಲ್ಕತ್ತಾ, ಜ.11 (DaijiworldNews/PY): "ಪಶ್ಚಿಮ ಬಂಗಾಳದಲ್ಲಿ ತೃಣ ಮೂಲ ಕಾಂಗ್ರೆಸ್ ಕಾರ್ಯಕರ್ತರ ಸಾಮೂಹಿಕ ನಿರ್ಗಮನಕ್ಕೆ ಕಾರಣವೇನು?" ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಕೇಳಿದ್ದಾರೆ.
ಈ ಬಗ್ಗೆ ಪದಾಧಿಕಾರಿಗಳು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಜೆ.ಪಿ ನಡ್ಡಾ ಅವರಿಗೆ ತಿಳಿಸಿದ್ದು, "ಬಿಜೆಪಿಗೆ 2021ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಿಗುವ ಸಾಧ್ಯತೆ ಇರುವ ಕಾರಣ ಅಧಿಕ ಮಂದಿ ಬಿಜೆಪಿ ನಾಯಕರು ಸೇರ್ಪಡೆಯಾಗುತ್ತಿದ್ದಾರೆ" ಎಂದಿದ್ದಾರೆ.
"ಅಧಿಕಾರದ ಆಸೆಯಿಂದಾಗಿ ಕೆಲವು ಮಂದಿ ಬಿಜೆಪಿಗೆ ಸೇರ್ಪಡೆಯಾಗಲು ಬಯಸುತ್ತಿರುವ ವಿಚಾರ ನ್ನ ಗಮನಕ್ಕೆ ಬಂದಿದೆ" ಎಂದು ನಡ್ಡಾ ತಿಳಿಸಿದ್ದಾರೆ.