ಜೈಪುರ,ಜ.10 (DaijiworldNews/HR): ರಾಜಸ್ಥಾನದಲ್ಲಿ ಮೊದಲ ಹಂತದಲ್ಲಿ 4.5 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ಹಾಕಲಾಗುವುದು ಎಂದು ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿದ ರಾಜಸ್ಥಾನ ಆರೋಗ್ಯ ಸಚಿವ ಡಾ. ರಘು ಶರ್ಮಾ, "ಮೊದಲ ಹಂತದ ಕೊರೊನಾ ಲಸಿಕೆ ವಿತರಣೆ ಜನವರಿ 16ರಿಂದ ಆರಂಭವಾಗಲಿದ್ದು, ಕಾರ್ಯಕ್ರಮದಲ್ಲಿ 4.5 ಲಕ್ಷ ಆರೋಗ್ಯ ಕಾರ್ಯಕರ್ತರನ್ನು ಸೇರಿಸಿಕೊಳ್ಳಲಾಗಿದ್ದು ಅವರಿಗೆ ಕೋವಿಶೀಲ್ಡ್ ಲಸಿಕೆ ಹಾಕಲಾಗುವುದು. 282 ಸ್ಥಳಗಳಲ್ಲಿ ಲಸಿಕೆ ಹಾಕಲು ಸರ್ಕಾರ ಪೂರ್ಣ ಸಿದ್ಧತೆ ನಡೆಸಿದೆ" ಎಂದು ತಿಳಿಸಿದ್ದಾರೆ.
ಇನ್ನು "ವಾಯು ಯಾನ ಸಂಪರ್ಕ ಹೊಂದಿರುವ ಜೈಪುರ, ಉದಯಪುರ ಮತ್ತು ಜೋಧಪುರದಲ್ಲಿ ಲಸಿಕೆ ಸಂಗ್ರಹಿಸಿಕೊಳ್ಳಲಾಗುವುದು. ರಾಜ್ಯ ಮಟ್ಟದ ಮೂರು, ವಿಭಾಗ ಮಟ್ಟದ 7 ಹಾಗೂ ಜಿಲ್ಲಾ ಮಟ್ಟದ 34, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಒಟ್ಟು 2,444 ಲಸಿಕೆ ಸಂಗ್ರಹ ಕೇಂದ್ರಗಳು ಕಾರ್ಯಾಚರಿಸಲಿವೆ" ಎಂದು ಹೇಳಿದ್ದಾರೆ.