ನವದೆಹಲಿ,ಜ.10 (DaijiworldNews/HR): ನನಗೆ ದೆಹಲಿಯಲ್ಲಿ ವರಿಷ್ಠರ ಭೇಟಿ ತೃಪ್ತಿ ನೀಡಿದ್ದು, ಆದಷ್ಟು ಬೇಗ ಶುಭ ಸುದ್ದಿ ಸಿಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ದೆಹಲಿಗೆ ತೆರಳಿರುವ ಅವರು ವರಿಷ್ಠರ ಜೊತೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, "ರಾಷ್ಟ್ರ ನಾಯಕರೊಂದಿಗಿನ ಚರ್ಚೆ ನನಗೆ ಸಂತೋಷ ತಂದಿದ್ದು,ವರಿಷ್ಠರೊಂದಿಗೆ ಕೂಡ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದು ವರಿಷ್ಠರು ಪೂರಕವಾದ ಸ್ಪಂದನೆಯನ್ನು ನೀಡಿದ್ದಾರೆ" ಎಂದರು,
ಇನ್ನು ಆದಷ್ಟು ಬೇಗ ಕೇಂದ್ರದ ನಾಯಕರಿಂದ ಶುಭ ಸುದ್ದಿ ಸಿಗಲಿದ್ದು, ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ವರಿಷ್ಠರಿಗೆ ತೃಪ್ತಿ ನೀಡಿದ್ದು ಮುಂಬರುವ ಲೋಕಸಭಾ ಮತ್ತು ವಿಧಾನ ಸಭಾ ಚುನಾವಣೆಯಲ್ಲೂ ಮೂರು ಸ್ಥಾನಗಳಲ್ಲೂ ಪಕ್ಷ ಗೆಲ್ಲುವ ಕುರಿತು ಚರ್ಚೆ ನಡೆಯಿತು" ಎಂದು ಹೇಳಿದ್ದಾರೆ.