ರಾಮೇಶ್ವರಂ, ಜ.10 (DaijiworldNews/HR): ರಾಮೇಶ್ವರಂನ ಒಂಬತ್ತು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಅಂತರರಾಷ್ಟ್ರೀಯ ಕಡಲ ಗಡಿರೇಖೆಯನ್ನು ಅತಿಕ್ರಮಣ ಮಾಡಿದ್ದಕ್ಕಾಗಿ ಶನಿವಾರ ರಾತ್ರಿ ಬಂಧಿಸಿದ್ದು, ಇದನ್ನು ಖಂಡಿಸಿ ಮಧ್ಯಾಹ್ನ ಮೀನುಗಾರರು ಅನಿರ್ಧಿಷ್ಟಾವದಿ ಮುಷ್ಕರ ಘೋಷಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಎ ಕಿರುಬಾಯಿ (37) ಎಸ್ ವಾಲನ್ ಕೌಶಿಕ್ (24), ಎ ಕೆನ್ನಿಂಗ್ಸ್ಟನ್ (28), ಆರ್ ಸ್ಯಾಮ್ ಸ್ಟಿಲ್ಲರ್ (20), ಎ ನಿಜಾನ್ (30), ಬ್ರೈಟನ್ (20), ಆರ್ ಕಿಶೋರ್ (27) ಮತ್ತು ಮಾರಿ (45), ಮೈಕಿಯಾಸ್ (30), ಅವರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ ಎಂದು ತಿಳಿದು ಬಂದಿದೆ.
ಇನ್ನು ದೋಣಿಯನ್ನು ಕೂಡ ವಶಪಡಿಸಿಕೊಳ್ಳಲಾಗಿದ್ದು, ಸುಮಾರು 20 ಯಾಂತ್ರಿಕೃತ ದೋಣಿಗಳಲ್ಲಿ ಲಂಕಾ ನೌಕಾಪಡೆಯ ಸಿಬ್ಬಂದಿ ಮೀನುಗಾರಿಕಾ ಬಲೆಗಳನ್ನು ಬೀಳಿಸಿದ್ದಾರೆ ಎಂದು ವರದಿಯಾಗಿದೆ.