ಚಂಡೀಘಡ, ಜ.10 (DaijiworldNews/PY): ಸಿಎಂ ಮನೋಹರ್ ಲಾಲ್ ಕಟ್ಟರ್ ಅವರ ಭೇಟಿ ಹಿನ್ನೆಲೆ ಹರಿಯಾಣದ ಟೋಲ್ ಪ್ಲಾಜಾ ಬಳಿ ರೈತರ ಮೇಲೆ ಪೊಲೀಸರು ಲಾಠಿ, ಅಶ್ರುವಾಯು ಪ್ರಯೋಗಿಸಿರುವ ವಿಡಿಯೋ ವೈರಲ್ ಆಗಿದೆ.
ಪೊಲೀಸರು, ಕೆಮಲಾ ಹಳ್ಳಿಗೆ ಬರಲು ಯತ್ನಿಸುತ್ತಿದ್ದ ರೈತರ ಮೇಲೆ ಜಲ ಫಿರಂಗಿ ಜಾಗೂ ಅಶ್ರುವಾಯು ಪ್ರಯೋಗ ಮಾಡಿದ್ದು, ಈ ದೃಶ್ಯ ಮೊಬೈಲ್ಗಳಲ್ಲಿ ಸೆರೆಯಾಗಿವೆ.
ಕೇಂದ್ರ ನೂತನ ಕೃಷಿ ಕಾಯ್ದೆಗಳನ್ನು ರದ್ದು ಮಾಡಿ ಎಂದು ಘೋಷಣೆ ಕೂಗುತ್ತಾ ನೂರಾರು ರೈತರು ಮೆರವಣಿಗೆ ಪ್ರಾರಂಭಿಸಿದ ಸಂದರ್ಭ, ಗುಂಪನ್ನು ಚದುರಿಸಲು ಅಶ್ರುವಾಯು ಪ್ರಯೋಗ ಮಾಡಿದ್ದು, ಬಳಿಕ ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಯೋಗ ಮಾಡಿದ್ದಾರೆ.
ಕೇಂದ್ರ ಸರ್ಕಾರರ ನೂತನ ಕೃಷಿ ಕಾಯ್ದೆಗಳ ಪ್ರಯೋಜನದ ವಿಚಾರವಾಗಿ ಕೆಮಲಾ ಹಳ್ಳಿಯಲ್ಲಿ ಸಿಎಂ ಮನೋಹರ್ ಲಾಲ್ ಕಟ್ಟರ್ ಅವರು ರೈತರನ್ನುದ್ದೇಶಿಸಿ ಮಾತನಾಡಬೇಕಿತ್ತು. ಆದರೆ, ಸಿಎಂ ಅವರ ಭೇಟಿ ರದ್ದಾಗುವಂತ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.