ಕೋಲ್ಕತ್ತಾ, ಜ.10 (DaijiworldNews/PY): ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಅವರ ಕಚೇರಿಯನ್ನು ಧ್ವಂಸಗೊಳಿಸಿದ ವಿಚಾರದ ಬಗ್ಗೆ ಬಿಜೆಪಿ ಆರೋಪಿಸಿದ್ದು, "ತೃಣ ಮೂಲ ಕಾರ್ಯಕರ್ತರು ಈ ಕೃತ್ಯವೆಸಗಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳನ್ನು ಬಂಧಿಸುವಂತೆ" ಹೇಳಿದೆ.
"ತೃಣಮೂಲ ಕಾರ್ಯಕರ್ತರಿಂದಾದ ಈ ಘಟನೆಯ ವಿರುದ್ದ ಪ್ರತಿಭಟನೆ ನಡೆಸುತ್ತೇವೆ. ಅವರ ಕೈಯಲ್ಲಿ ಆಡಳಿತವಿರುವ ಕಾರಣ ಅವರು ಈ ರೀತಿ ಮಾಡಿದ್ದಾರೆ" ಎಂದು ಬಿಜೆಪಿ ಮುಖಂಡ ಕಾನಿಷ್ಕ ಪಾಂಡೆ ತಿಳಿಸಿದ್ದಾರೆ.
"ಈ ಘಟನೆಯ ಹಿಂದಿರುವ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಅಥವಾ ಯವುದೇ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಂದೆ ಸಂಭವಿಸುವಂತ ಘಟನೆಗಳಿಗೆ ನೀವೆ ಹೊಣೆಯಾಗಬೇಕಾಗುತ್ತದೆ" ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಟಿಎಂಸಿ ಪೂರ್ವ ಮಿಡ್ನಾಪುರ ಜಿಲ್ಲೆಯ ಉಪಾಧ್ಯಕ್ಷ ಎಸ್ ಕೆ ಸೂಫಿಯಾನ್, "ಬಿಜೆಪಿಯ ಹಳೆಯ ಕಾರ್ಯಕರ್ತರು ಈ ಘಟನೆಗೆ ಕಾರಣ" ಎಂದು ಹೇಳಿದ್ದಾರೆ.
"ಬಿಜೆಪಿಗರು ಯಾವಾಗಲೂ ಸುಳ್ಳು ಹೇಳುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಅವರು ಟಿಎಂಸಿ ಧ್ವಜ ಸೇರಿದಂತೆ ಮಮತಾ ಬ್ಯಾನರ್ಜಿ ಅವರ ಭಾವಚಿತ್ರವನ್ನು ಹರಿದು ಹಾಕಿದ್ದಲ್ಲದೇ, ಬೆಂಕಿ ಹಚ್ಚಿದ್ದಾರೆ. ಮೊದಲು ತಮ್ಮ ಮನೆಯವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಿ. ನಂತರ ಟಿಎಂಸಿಯನ್ನು ದೂಷಿಸಲಿ" ಎಂದಿದ್ದಾರೆ.