ಮುಂಬೈ, ಜ.10 (DaijiworldNews/PY): "ಸೌದಿ ಅರೇಬಿಯಾ ಮಾದರಿಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವವರಿಗೆ ಹಾಗೂ ಅತ್ಯಾಚಾರಿಗಳಿಗೆ ಶಿಕ್ಷೆ ನೀಡಬೇಕು" ಎಂದು ನಟಿ ಕಂಗನಾ ರಣಾವತ್ ಆಗ್ರಹಿಸಿದ್ದಾರೆ.
ಭೋಪಾಲ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮಹಿಳೆಯರಿಗೆ ಕಿರುಕುಳ ನೀಡುವವರನ್ನು ನಡುಬೀದಿಯಲ್ಲೇ ಗಲ್ಲಿಗೇರಿಸಬೇಕು" ಎಂದು ಹೇಳಿದ್ದಾರೆ.
"ಅನೇಕ ಮಹಿಳೆಯರಿಗೆ ತಮಗಾಗಿರುವ ಕಿರುಕುಳಗಳಂತಹ ಅನುಭವದ ಬಗ್ಗೆ ಹೇಳುವಂತ ಧೈರ್ಯವಿರುವುದಿಲ್ಲ. ಇದನ್ನು ಹೇಳಿಕೊಳ್ಳದೇ ಇರಲು ನಮ್ಮ ಸಂಪ್ರದಾಯವಾದಿ ಕಾನೂನುಗಳು ಕಾರಣ" ಎಂದಿದ್ದಾರೆ.
"ಇಲ್ಲಿ ನಾವು ಪ್ರಕರಣಗಳನ್ನು ತುಂಬಾ ದಿನಗಳ ಕಾಲ ಮುಂದುವರಿಸುತ್ತಲೇ ಹೋಗುತ್ತೇವೆ. ಬಳಿಕ ತಾವು ವರ್ಷಗಳಿಂದ ಅನುಭವಿಸುತ್ತಿರುವ ಕಿರುಕುಳದ ವಿಚಾರವಾಗಿ ಹೇಳಬೇಕಾಗುತ್ತದೆ. ಸೌದಿ ಅರೇಬಿಯಾದಂತಹ ಉದಾಹರಣೆಗಳನ್ನು ತೆಗೆದುಕೊಂಡರೆ ಈ ರೀತಿಯಾದ ಕಿರುಕುಳಗಳನ್ನು ಮರುಕಳಿಸದಂತೆ ಮಾಡಲು ಆಗುತ್ತದೆ" ಎಂದು ತಿಳಿಸಿದ್ದಾರೆ.