ನವದೆಹಲಿ, ಜ.10 (DaijiworldNews/PY): ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ದೇಶಾದ್ಯಂತ ರಾಜಭವನಗಳ ಮುಂದೆ ಜ.15ರಂದು ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಪ್ರಕಟಿಸಿದೆ.
"ಕೇಂದ್ರವು ತನ್ನ ಜನರ ಬಗ್ಗೆ ತನ್ನ ಕರ್ತವ್ಯವನ್ನು ಏಕೆ ಮಾಡುತ್ತಿಲ್ಲ?. ಇವುಗಳನ್ನು ವಿರೋಧಿಸಿ ಜ.15ರಂದು ಕಾಂಗ್ರೆಸ್ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆಸುವ ಮುಖೇನ ಕಿಸಾನ್ ಅಧಿಕಾರ ದಿವಸ್ ಆಚರಣೆ ಮಾಡಲು ತಿರ್ಮಾನಿಸಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ತಿಳಿಸಿದ್ದಾರೆ.
"ಇದರೊಂದಿಗೆ ನಾವು ದೇಶದಾದ್ಯಂತ ಸರಣಿ ಪ್ರತಿಭಟನಾ ರ್ಯಾಲಿಗಳನ್ನು ಕೂಡಾ ಆಯೋಜಿಸಲಿದ್ದೇವೆ. ರಾಜಭವನಗಳಿಗೆ ಪ್ರತಿಭಟನಾ ಮೆರವಣಿಗೆಯ ಮುಖೇನ ಮುತ್ತಿಗೆ ಹಾಕುತ್ತೇವೆ" ಎಂದಿದ್ದಾರೆ.
"ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ಬದಲಾಗಿ ರೈತರ ಜೊತೆ ಸಭೆ ನಡೆಸುವ ನಾಟಕವಾಡುತ್ತಿದೆ" ಎಂದು ಹೇಳಿದ್ದಾರೆ.