ನವದೆಹಲಿ, ಜ.09 (DaijiworldNews/PY): ಜ.11ರ ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್ಗೆ ಲಸಿಕೆ ನೀಡುವ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿರ್ಬಂಧಿತ ತುರ್ತು ಬಳಕೆಗೆ ಕೊರೊನಾ- ಸಿರಮ್ ಇನ್ಸ್ಟಿಟ್ಯೂಟ್ನ ಕೋವಿಶೀಲ್ಡ್ ಹಾಗೂ ಭಾರತ್ ಬಯೊಟೆಕ್ನ ಕೋವಾಕ್ಸಿನ್ ಎರಡು ಲಸಿಕೆಗಳನ್ನು ದೇಶದ ಔಷಧ ನಿಯಂತ್ರಕ ಅನುಮೋದಿಸಿದ ಕೆಲವು ದಿನಗಳ ನಂತರ ಕೊರೊನಾ ಲಸಿಕೆ ನೀಡುವ ಬಗ್ಗೆ ಸಭೆ ನಡೆಸಲಾಗುತ್ತಿದೆ. ಸಭೆಯು ಸಂಜೆ 4 ಗಂಟೆಗೆ ನಡೆಯಲಿದೆ ಎಂಬುದಾಗಿ ಮೂಲಗಳು ಹೇಳಿವೆ.
ಪ್ರಸ್ತುತ ಕೋವಾಕ್ಸಿನ್ ಮೂರನೇ ಹಂತದಲ್ಲಿದೆ. ಆದರೆ, ಈ ಲಸಿಕೆ ಸುರಕ್ಷಿತ ಹಾಗೂ ದೃಢವಾಗಿ ರೋಗನಿರೋಧಕ ಪ್ರತಿಕ್ರಿಯೆಯನ್ನು ನೀಡುತ್ತದೆ ಎಂದು ಔಷಧ ನಿಯಂತ್ರಕ ತಿಳಿಸಿತ್ತು.