ಕೋಲ್ಕತ್ತ, ಜ.08 (DaijiworldNews/PY): ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಹೋದರನ ಪುತ್ರಿ, ಖ್ಯಾತ ಶಿಕ್ಷಣ ತಜ್ಞೆ ಚಿತ್ರಾ ಘೋಷ್ (90) ಅವರು ಜ.7ರ ಗುರುವಾದಂದು ನಿಧನರಾದರು.
ಈ ಬಗ್ಗೆ ತಿಳಿಸಿದ ಚಿತ್ರಾ ಘೋಷ್ ಅವರ ಸೋದರಳಿಯ ಬಿಜೆಪಿ ನಾಯಕ ಚಂದ್ರ ಕುಮಾರ್ ಬೋಸ್, "ಶರತ್ ಚಂದ್ರ ಬೋಸ್ ಅವರ ಕಿರಿಯ ಪುತ್ರಿ ಜ.7 ಗುರುವಾರದಂದು ಬೆಳಿಗ್ಗೆ 10.30ಕ್ಕೆ ನಿಧನರಾದರು" ಎಂದಿದ್ದಾರೆ
ಚಿತ್ರಾ ಘೋಷ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, "ಶಿಕ್ಷಣ ತಜ್ಞೆ ಚಿತ್ರಾ ಘೋಷ್ ಅವರು ಶಿಕ್ಷಣ ಹಾಗೂ ಸಮುದಾಯ ಸೇವೆಗಳಿಗೆ ಮಹತ್ತರವಾದ ಕೊಡುಗೆಗಳನ್ನು ನೀಡಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬಗೆಗಿನ ವಿಷಯಗಳ ಕುರಿತು ನಾವು ಚರ್ಚಿಸಿದಾಗ ಅವರೊಂದಿಗಿನ ನನ್ನ ಸಂವಾದವನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅವರ ನಿಧನದಿಂದ ಬೇಸರವಾಗಿದೆ" ಎಂದು ತಿಳಿಸಿದ್ದಾರೆ.