ಬೆಂಗಳೂರು, ಜ.08 (DaijiworldNews/PY): ಜೆಡಿಎಸ್ ನಾಯಕ ಸಾ.ರಾ.ಮಹೇಶ್ ಅವರು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರ ವಿರುದ್ದ ಟೀಕಾ ಪ್ರಹಾರ ನಡೆಸಿದ್ದು, "ಬೊಂಬಾಯಿ ಮಿಠಾಯಿ ವಿಶ್ವನಾಥ್ ಅವರ ನಾಲಿಗೆಗೆ ಇನ್ನೊಬ್ಬರನ್ನು ವ್ಯಕ್ತಿಗತವಾಗಿ ಜರಿಯುವ ಹಕ್ಕಾದರೂ ಇದೆಯಾ?" ಎಂದು ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಾ.ರಾ.ಮಹೇಶ್, "ಬೊಂಬಾಯಿ ಮಿಠಾಯಿ ವಿಶ್ವನಾಥ್ ಅವರ ನಾಲಿಗೆಗೆ ಇನ್ನೊಬ್ಬರನ್ನು ವ್ಯಕ್ತಿಗತವಾಗಿ ಜರಿಯುವ ಹಕ್ಕಾದರೂ ಇದೆಯಾ? ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ" ಎಂದಿದ್ದಾರೆ.
"ಬೌದ್ಧಿಕ ದಿವಾಳಿತನಕ್ಕೆ ತುತ್ತಾದವರು ಮಾತ್ರ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವ್ಯಕ್ತಿಗತ ಲೇವಡಿಗಿಳಿಯುತ್ತಾರೆ. ಅವರು ಎಂದೋ ಬಫೂನ್ ಆಗಿರುವುದನ್ನು ಮರೆತಿರುತ್ತಾರೆ. ಬೊಂಬಾಯಿ ಮಿಠಾಯಿ ರುಚಿ ಸವೆದಿದ್ದು ಮಂತ್ರಿಯಾಗುವ ತಿರುಕನ ಕನಸು ಕಾಣುತ್ತಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.
"ತಾನು ಘನವಾಗದೆ ಘನವೇನು ಬಂತು. ಹರುಕುಬಾಯಿ, ಕೊಳೆತ ಮೆದುಳು ಮಂತ್ರಿಗಿರಿಯ ಘನತೆಗೆ ಊಳಿಡುತಿದೆ. ಎಂದೋ ಭಿಕ್ಷುಕನಾಗಿರುವ ವಿಶ್ವನಾಥ್ ಎರಡು ಬಾರಿ ಮುಖ್ಯಮಂತ್ರಿಯಾದವರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳದಿದ್ದರೆ ತಕ್ಕಶಾಸ್ತಿ ಮಾಡಬೇಕಾಗುತ್ತದೆ ಎಚ್ಚರ" ಎಂದು ಎಚ್ಚರಿಕೆ ನೀಡಿದ್ದಾರೆ.