ನವದೆಹಲಿ:, ಜ.07 (DaijiworldNews/PY): ರೂಪಾಂತರಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಬ್ರಿಟನ್ನಿಂದ ಬರುವ ವಿಮಾನಗಳಿಗೆ ವಿಧಿಸಿರುವ ನಿರ್ಬಂಧವನ್ನು ಜ.31ರ ತನಕ ವಿಸ್ತರಣೆ ಮಾಡುವಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಇಂಗ್ಲೆಂಡ್ನಲ್ಲಿ ರೂಪಾಂತರಿ ಕೊರೊನಾ ವೈರಸ್ನ ತೀವ್ರತೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಬ್ರಿಟನ್ನಿಂದ ಬರುವ ಪ್ರಯಾಣಿಕರ ವಿಮಾನಗಳ ಸಂಚಾರವನ್ನು ಜ.31ರವರೆಗೆ ವಿಸ್ತರಿಸುವಂತೆ ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ" ಎಂದಿದ್ದಾರೆ.
"ಭಾರತದಿಂದ ಯುಕೆಗೆ ಜ.6ರಿಂದ ವಿಮಾನ ಸಂಚಾರ ಪುನರಾರಂಭಿಸಲಾಗುವುದು" ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದರು.