ಬೆಂಗಳೂರು, ಜ.07 (DaijiworldNews/PY): "ಬಸವರಾಜ ಹೊರಟ್ಟಿ ಅವರಿಗೆ ಬಿಜೆಪಿಯೊಂದಿಗೆ ಸಖ್ಯ ಬೆಳೆಸುತ್ತೇವೆ ಎಂದು ಹೇಳಲು ಯಾರು ಸ್ವಾತಂತ್ರ್ಯ ಕೊಟ್ಟಿದ್ದು?. ಅವರು ಮೈತ್ರಿ ಎಂದು ಏಕೆ ಹೇಳಬೇಕಿತ್ತು?" ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.
ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅವರು, "ಬಿಜೆಪಿ ಜೊತೆ ಬರುತ್ತೇವೆ ಎಂದು ಅರುಣ್ ಸಿಂಗ್ ಅವರಿಗೆ ಅರ್ಜಿ ಹಾಕಿದ್ದು ಯಾರು?. ಬಿಜೆಪಿ ಸಖ್ಯದ ಬಗ್ಗೆ ಸ್ಪಷ್ಟವಾದ ನಿಲುವು ನೀಡಬೇಕು" ಎಂದು ಒತ್ತಾಯಿಸಿದರು.
"ನಮ್ಮಲ್ಲಿ ದ್ವಂದ್ವ ನಿಲುವು ಬೇಡ. ಯಾವುದಾದರು ಒಂದು ನಿಲುವು ಇರಲಿ" ಎಂದರು.
"ಬಸವರಾಜ ಹೊರಟ್ಟಿ ಅವರು ಸಭಾಪತಿಯಾಗದಿದ್ದರೆ ಯಾವ ದೇಶ ಮುಳುಗುತ್ತದೆ. ಯಾರದೋ ಸ್ವಾರ್ಥಕ್ಕಾಗಿ ಪಕ್ಷವನ್ನು ಬಲಿ ಕೊಡಬಾರದು. ಈ ಮಾತುಗಳನ್ನು ಮನನೊಂದು ಹೇಳುತ್ತಿದ್ದೇನೆ. ಅನಗತ್ಯವಾದ ಹೇಳಿಕೆಗಳಿಂದ ವಿಭಿನ್ನವಾದ ನಿಲುವುಗಳು ಬರುತ್ತಿವೆ" ಎಂದು ಹೇಳಿದರು.