ಮುಂಬೈ, ಜ. 07 (DaijiworldNews/MB) : ಡ್ರಗ್ ಪೆಡ್ಲರ್ ಜತೆ ನಿಕಟ ನಂಟು ಹೊಂದಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ರಿಂಗ್ ಮಾಸ್ಟರ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ನಟಿ ಶ್ವೇತಾ ಕುಮಾರಿಗೆ ಮುಂಬೈ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ವಿಧಿಸಿದೆ.
ಶ್ವೇತಾ ಕುಮಾರಿ ಮುಂಬೈನ ಹೊಟೇಲ್ನಲ್ಲಿ ತಂಗಿದ್ದರು. ಅವರು ಡ್ರಗ್ ಪೆಡ್ಲರ್ ಜತೆ ತಂಗಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿ 400 ಗ್ರಾಂ ಡ್ರಗ್ ಸಮೇತ ಡ್ರಗ್ ಪೆಡ್ಲರ್ ಚಾಂದ್ ಶೇಖ್ ಮತ್ತು ಶ್ವೇತಾ ಅವರನ್ನು ವಶಕ್ಕೆ ಪಡೆದಿದ್ದರು.
ಕನ್ನಡದಲ್ಲಿ "ರಿಂಗ್ ಮಾಸ್ಟರ್" ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಶ್ವೇತಾ ಕುಮಾರಿ ತೆಲುಗು, ತಮಿಳು ಚಿತ್ರರಂಗದಲ್ಲಿಯೂ ಕಾರ್ಯ ಪ್ರವೃತ್ತರಾಗಿದ್ದಾರೆ.