ಬೆಂಗಳೂರು, ಜ. 07 (DaijiworldNews/MB) : "ನಿರುದ್ಯೋಗಂ ಬಿಜೆಪಿ ಲಕ್ಷಣಂ" ಮಾತು ಸೂಕ್ತವೆನಿಸುತ್ತಿದೆ ಎಂದು ಬಿಜೆಪಿಯನ್ನು ಕರ್ನಾಟಕ ಕಾಂಗ್ರೆಸ್ ಲೇವಡಿ ಮಾಡಿದೆ.
ದೇಶದಲ್ಲಿ ನಿರುದೋಗ್ಯ ಪ್ರಮಾಣ ಹೆಚ್ಚಾಗುತ್ತಿರುವ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ''ದೇಶದ ನಿರುದ್ಯೋಗ ಪ್ರಮಾಣ 24%ಗೆ ಏರಿದೆ. ನರೇಂದ್ರ ಮೋದಿ ಸರ್ಕಾರದ ದುರಾಡಳಿತದಲ್ಲಿ 45 ವರ್ಷಗಳ ಐತಿಹಾಸಿಕ ನಿರುದ್ಯೋಗ ದಾಖಲಾಗಿತ್ತು. ಇದಾದ ನಂತರ. ಆರ್ಥಿಕ ಕುಸಿತ, ಅವೈಜ್ಞಾನಿಕ ಲಾಕ್ ಡೌನ್,12 ಕೋಟಿ ಉದ್ಯೋಗಳು ನಷ್ಟವಾಗಿವೆ. ಕರ್ನಾಟಕ ಬಿಜೆಪಿಗೆ 'ನಿರುದ್ಯೋಗಂ ಬಿಜೆಪಿ ಲಕ್ಷಣಂ' ಮಾತು ಸೂಕ್ತವೆನಿಸುತ್ತಿದೆ'' ಎಂದು ವ್ಯಂಗ್ಯವಾಡಿದೆ.
2020 ನೇ ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದೇ ಟ್ವೀಟರ್ನಲ್ಲಿ ಮೋದಿ ಹುಟ್ಟು ಹಬ್ಬದ ಶುಭ ಹಾರೈಕೆಗಳು ಟ್ರೆಂಡ್ ಆಗುತ್ತಿರುವ ನಡುವೆಯೇ ರಾಷ್ಟ್ರೀಯ ನಿರುದ್ಯೋಗ ದಿನ ಕೂಡಾ ಟ್ರೆಂಡ್ ಆಗಿತ್ತು ಎಂದು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.