ರಾಜಸ್ಥಾನ, ಜ.07 (DaijiworldNews/PY): "ರಾಜಸ್ಥಾನದಲ್ಲಿ ಸುಮಾರು 100 ಮಂದಿ ಅಪಹರಿಸಿದ್ದ 38 ಮಹಿಳೆಯರು ಹಾಗೂ ಮಕ್ಕಳನ್ನು ರಕ್ಷಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಘಟನೆ ರಾಜಸ್ಥಾನದ ಜಲ್ವಾರ್ನ ಬಾಮನ್ ದೇವರಿಯನ್ ಗ್ರಾಮದ ಉನ್ಹೆರ್ ಪೊಲೀಸ್ ಠಾಣಾ ಪ್ರದೇಶದಲ್ಲಿ ನಡೆದಿದೆ.
"ಮಾರಕಾಯುಧಗಳೊಂದಿಗೆ ಗ್ರಾಮಕ್ಕೆ ಬಂದು 100 ಜನರು, ಮಹಿಳೆಯರು ಸೇರಿದಂತೆ ಮಕ್ಕಳನ್ನು ಅಪಹರಿಸಿದ್ದರು. ಅವರೆಲ್ಲರನ್ನೂ ರಕ್ಷಿಸಲಾಗಿದೆ. ಹಾಗೂ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ" ಎಂದು ಜಲ್ವಾರ್ ಎಸ್ಪಿ ಡಾ.ಕಿರಣ್ ಕಾಂಗ್ ಸಿಂಧು ಹೇಳಿದ್ದಾರೆ.
"ಮಧ್ಯಪ್ರದೇಶದ ರಟ್ಲಾಂ ಜಿಲ್ಲೆಯಿಂದ ಬಸ್ ಹಾಗೂ ಇತರ ಗಾಡಿಗಳ ಮುಖೇನ ಬಂದ ಆರೋಪಿಗಳು ಗ್ರಾಮಕ್ಕೆ ಧಾವಿಸಿದ್ದು, ಅವರ ಬಳಿ ಮಾರಕಾಯುಧಗಳಿದ್ದವು" ಎಂದು ತಿಳಿಸಿದ್ದಾರೆ.
"ಈ ಬಗ್ಗೆ ಮಾಹಿತಿ ದೊರೆತ ಕೂಡಲೇ ಪೊಲೀಸರು ಕಾರ್ಯಚರಣೆ ನಡೆಸಿ 38 ಮಹಿಳೆಯರು ಹಾಗೂ ಮಕ್ಕಳನ್ನು ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ಮಾರಕಾಯುಧಗಳನ್ನು ವಶಕ್ಕೆ ಪಡೆಯಲಾಗಿದೆ" ಎಂದು ಹೇಳಿದ್ದಾರೆ.
ಆರೋಪಿಗಳ ವಿರುದ್ದ ಐಪಿಸಿ ಅಡಿಯಲ್ಲಿ ದೂರು ದಾಖಲಿಸಲಾಗಿದ್ದು, ಪರಾರಿಯಾದ ಉಳಿದ ಆರೋಪಿಗಳನ್ನು ಬಂಧಿಸುವ ಯತ್ನದಲ್ಲಿದ್ದಾರೆ.