ಕಲ್ಲಿಕೋಟೆ, ಜ. 07 (DaijiworldNews/MB) : ಕೇರಳದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಕೆಕೆ ರಾಮಚಂದ್ರನ್ ನಿಧನರಾಗಿದ್ದಾರೆ.
ಕೇರದಳಲ್ಲಿ ರಾಮಚಂದ್ರನ್ ಮಾಸ್ಚರ್ ಎಂದೇ ಖ್ಯಾತಿ ಗಳಿಸಿದ್ದ 78 ವರ್ಷ ಪ್ರಾಯವಾಗಿದ್ದ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
1995-96ರ ಅವಧಿಯಲ್ಲಿ ಎಕೆ ಆ್ಯಂಟಿನಿ ಸರ್ಕಾರದಲ್ಲಿ ಅವರು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದು 2004ರಲ್ಲಿ ಉಮನ್ ಚಾಂಡಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು. ಸುಲ್ತಾನ್ ಬಾಥೆರಿ ಮತ್ತು ಕಾಲ್ಪೆಟ್ಟಾ ಕ್ಷೇತ್ರಗಳಲ್ಲಿ ತಲಾ ಮೂರು ಬಾರಿ ಅವರು ಸ್ಪರ್ಧಿಸಿದ್ದರು.
ರಾಮಚಂದ್ರನ್ ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿಪಕ್ಷ ನಾಯಕ ರಮೇಶ್ ಚೆನ್ನೀಥಲ ಸಂತಾಪ ಸೂಚಿಸಿದ್ದಾರೆ.