ಬೆಂಗಳೂರು, ಜ. 07 (DaijiworldNews/MB) : ''ರಾಜ್ಯದಾದ್ಯಂತ ಜ.17ರಂದು ಪಲ್ಸ್ ಪೋಲಿಯೊ ಕಾರ್ಯಕ್ರಮ ಆಯೋಜಲಾಗಿದೆ. ಐದು ವರ್ಷದೊಳಗಿನ ಎಲ್ಲ ಮಕ್ಕಳೂ ಪಲ್ಸ್ ಪೋಲಿಯೊ ಲಸಿಕೆ ಹಾಕಿಸಿಕೊಳ್ಳಬೇಕು'' ಎಂದು ಆರೋಗ್ಯ ಇಲಾಖೆ ತಿಳಿಸಿದೆ.
''ಪೋಲಿಯೊ ವಿರುದ್ಧ ಹೋರಾಟದಲ್ಲಿ ಜಯಗಳಿಸುವ ನಿಟ್ಟಿನಲ್ಲಿ 5 ವರ್ಷದೊಳಗಿನ ಮಗುವಿಗೆ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸಬೇಕು. ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು'' ಎಂದು ಇಲಾಖೆ ಮನವಿ ಮಾಡಿದೆ.
''ನಿಯರ್ಬಾಯ್ ವ್ಯಾಕ್ಸಿನೇಶನ್ ಸೆಂಟರ್ ಕರ್ನಾಟಕ ಮೊಬೈಲ್ ಆ್ಯಪ್ನಲ್ಲಿ ಪೋಲಿಯೊ ಲಸಿಕೆ ವಿತರಣೆಯ ಹತ್ತಿರದ ಕೇಂದ್ರಗಳ ಮಾಹಿತಿ ದೊರೆಯಲಿದೆ'' ಎಂದು ಕೂಡಾ ಇಲಾಖೆ ಮಾಹಿತಿ ನೀಡಿದೆ.
''ಹಾಗೆಯೇ ಕೊರೊನಾ ಕಾರಣದಿಂದಾಗಿ ಎಲ್ಲರೂ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ಮಾರ್ಗಸೂಚಿ ಪಾಲಿಸಬೇಕು'' ಎಂದು ತಿಳಿಸಿದೆ.