ನವದೆಹಲಿ, ಜ.06 (DaijiworldNews/PY): ಉತ್ತರ ಪ್ರದೇಶದ ಬದಾಂಯು ಜಿಲ್ಲೆಯಲ್ಲಿ 50 ವರ್ಷದ ಮೇಲೆ ನಡದ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ಪ್ರದೇಶ ಸರ್ಕಾರ ವಿರುದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಯುಪಿ ಸರ್ಕಾರವು ಹತ್ರಾಸ್ನ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತರ ಸಮಸ್ಯೆಯನ್ನು ಕೇಳಲಿಲ್ಲ. ಬದಲಾಗಿ ಅಧಿಕಾರಿಗಳನ್ನು ರಕ್ಷಿಸಿ ಸಂತ್ರಸ್ತರ ಧ್ವನಿಯನ್ನು ನಿಗ್ರಹಿಸಿತ್ತು" ಎಂದಿದ್ದಾರೆ.
"ಉತ್ತರ ಪ್ರದೇಶ ಸರ್ಕಾರದಲ್ಲಿ ಮಹಿಳೆಗೆ ಸುರಕ್ಷತೆ ಇಲ್ಲ. ಯಾವುದೇ ರೀತಿಯಾದ ಭದ್ರತೆ ಇಲ್ಲ" ಎಂದು ಹೇಳಿದ್ದಾರೆ.
"ಇದೀಗ ಬದಾಂಯು ಜಿಲ್ಲೆಯಲ್ಲೂ ಕೂಡಾ ಸಂತ್ರಸ್ತರ ಮನವಿಯನ್ನು ಪೊಲೀಸ್ ಅಧಿಕಾರಿಯೋರ್ವರು ಆಲಿಸಲಿಲ್ಲ. ಘಟನಾ ಸ್ಥಳವನ್ನು ಕೂಡಾ ಪರಿಶೀಲನೆ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ. ಮಹಿಳೆಯ ಸುರಕ್ಷತೆಯ ಬಗ್ಗೆ ಯುಪಿ ಸರ್ಕಾರದ ನಿರ್ಣಯದಲ್ಲಿ ನ್ಯೂನ್ಯತೆ ಇದೆ" ಎಂದಿದ್ದಾರೆ.