ಬೆಂಗಳೂರು, ಜ. 06 (DaijiworldNews/MB) : ಹಿಂದೂ ಪುರೋಹಿತರನ್ನು ವಿವಾಹವಾಗಲು ಯುವತಿಯರು ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂಬ ಅಂಶವನ್ನು ಪರಿಗಣನೆಗೆ ತೆಗೆದುಕೊಂಡು, ಪುರೋಹಿತರನ್ನು ವಿವಾಹವಾಗಲು ಸಿದ್ಧರಿರುವ ಯುವತಿಯರಿಗೆ ಬಹುಮಾನ ನೀಡುವ ಯೋಜನೆಯನ್ನು ಘೋಷಿಸಲು ಸರ್ಕಾರ ಯೋಜಿಸಿದೆ. ಈ ಯೋಜನೆಯನ್ನು ಜನವರಿ 6 ರ ಬುಧವಾರ ಮುಖ್ಯಮಂತ್ರಿಗಳು ಕಾರ್ಯರೂಪಕ್ಕೆ ತರಲಿದ್ದಾರೆ.
ಮೈತ್ರಿ ಯೋಜನೆಯಡಿ ಪುರೋಹಿತರನ್ನು ವಿವಾಹವಾಗುವ ಯುವತಿಯರು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಮೂರು ಲಕ್ಷ ರೂ. ಬಾಂಡ್ ಪಡೆಯಲಿದ್ದಾರೆ. ಫಲಾನುಭವಿಗಳು ಮೂರು ವರ್ಷಗಳ ಬಳಿಕ ಬಾಂಡ್ ಹಣ ಪಡೆಯಬಹುದಾಗಿದೆ.
ಈ ಮಾಹಿತಿಯನ್ನು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಎಚ್. ಸಚಿದಾನಂದ ಅವರು ನೀಡಿದ್ದಾರೆ. 'ಮೈತ್ರಿ' ಯೋಜನೆಯಡಿ ವಧುಗಳಿಗೆ ಮೊದಲ ಬಾರಿಗೆ ಮೂರು ಲಕ್ಷ ರೂ.ಗಳ ಬಾಂಡ್ ನೀಡಲಾಗುವುದು ಎಂದು ಹೇಳಿದರು. ''ಯುವತಿಯರು ಪುರೋಹಿತರನ್ನು ವಿವಾಹವಾಗಲು ಹಿಂದೇಟು ಹಾಕುತ್ತಿರುವ ಕಾರಣ ಧಾರ್ಮಿಕ ಆಚರಣೆಗಳನ್ನು ಮಾಡುವ ವೃತ್ತಿಯಲ್ಲಿ ತೊಡಗಿರುವವರು ಅವಿವಾಹಿತರಾಗಿ ಉಳಿದಿದ್ದಾರೆ'' ಎಂದು ಕೂಡಾ ಹೇಳಿದರು.
''ಅದೇ ರೀತಿಯಲ್ಲಿ, ಬಡ ಹುಡುಗಿಯರ ಮದುವೆಗೆ ಮಂಡಳಿಯು 25 ಸಾವಿರ ರೂ.ಗಳ ಹಣಕಾಸಿನ ನೆರವು ನೀಡಲಿದೆ. ಐದು ಎಕರೆಗಿಂತ ಕಡಿಮೆ ಭೂಮಿಯನ್ನು ಹೊಂದಿರುವ ಕುಟುಂಬಗಳಿಗೆ ಹೈನುಗಾರಿಕೆ ಚಟುವಟಿಕೆ ಕೈಗೊಳ್ಳಲು ಬೋರ್ವೆಲ್ ಹಾಕಲು ಮತ್ತು ಟ್ರಾಕ್ಟರ್ಗಾಗಿ ಆರ್ಥಿಕ ನೆರವು ಮಾಡಲಾಗುವುದು'' ಎಂದು ತಿಳಿಸಿದರು.