ಧಾರವಾಡ, ಜ.06 (DaijiworldNews/PY): ಯೋಗೀಶಗೌಡ ಹತ್ಯೆ ಪ್ರಕರಣದಡಿ ಬಂಧನದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ.
ವಿನಯ್ ಕುಲಕರ್ಣಿ ಅವರು ಜಾಮೀನು ಅರ್ಜಿ ಇಂದು ಧಾರವಾಡ ಹೈಕೋರ್ಟ್ನಲ್ಲಿ ವಿಚಾರಣೆಗೆ ಬಂದಿತ್ತು. ಆದರೆ, ವಿನಯ್ ಕುಲಕರ್ಣಿ ಅವರಿಗೆ ಏಕೆ ಜಾಮೀನು ನೀಡಬಾರದು ಎನ್ನುವ ಬಗ್ಗೆ ಸಿಬಿಐ ಅಧಿಕಾರಿಗಳು ತಕರಾರು ಸಲ್ಲಿದ್ದು, ಹೈಕೋರ್ಟ್ ಇದರ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.
ವಿನಯ್ ಕುಲಕರ್ಣಿ ಅವರು ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ. ವಿನಯ್ ಅವರ ಬಿಡುಗಡೆಯಾಗಲಿ ಎಂದು ಅವರ ಅಭಿಮಾನಿಗಳು ಹಾಗೂ ಬಂಧುಗಳು ಕಳೆದ ಒಂದು ವಾರದಿಂದ ದೇವರಿಗೆ ವಿಶೇಷ ಪೂಜೆ ಹಮ್ಮಿಕೊಂಡಿದ್ದರು.