ಬೆಂಗಳೂರು, ಜ. 06 (DaijiworldNews/MB) : ''ಬ್ರಿಟನ್ನಿಂದ ರಾಜ್ಯಕ್ಕೆ ಬಂದಿರುವ 3,137 ಪ್ರಯಾಣಿಕರ ಪೈಕಿ 2,292 ಜನರಿಗೆ ಮಾತ್ರವೇಕೆ ಕೊರೊನಾ ಪರೀಕ್ಷೆ ಮಾಡಿಸಲಾಗಿದೆ. ಉಳಿದ 700 ಮಂದಿಗೆ ಕೊರೊನಾ ಪರೀಕ್ಷೆ ಯಾಕೆ ಮಾಡಿಲ್ಲ'' ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠವು ರಾಜ್ಯ ಸರ್ಕಾರ ಸಲ್ಲಿಸಿದ್ದ ವಿವರ ಪರಿಶೀಲಿಸಿದ್ದು, ''ಎಲ್ಲರಿಗೂ ಕೊರೊನಾ ಪರೀಕ್ಷೆ ಯಾಕೆ ಮಾಡಿಲ್ಲ ಎಂದು ಸ್ಪಷ್ಟಣೆ ನೀಡಬೇಕು'' ಎಂದು ತಿಳಿಸಿದೆ.
ಹೈಕೋರ್ಟ್ಗೆ ರಾಜ್ಯ ಸರ್ಕಾರವು, ''34 ಪ್ರಯಾಣಿಕರು ಹಾಗೂ 14 ಮಂದಿ ಪ್ರಾಥಮಿಕ ಸಂಪರ್ಕಿತರಲ್ಲಿ ಕೊರೊನಾ ದೃಢಪಟ್ಟಿದೆ. ಇನ್ನು 176 ಜನರ ವರದಿ ಇನ್ನಷ್ಟೇ ಬರಬೇಕಿದೆ. ಇನ್ನೂ ಕೂಡಾ 75 ಪ್ರಯಾಣಿಕರು ಪತ್ತೆಯಾಗಿಲ್ಲ. ಕೊರೊನಾ ವರದಿ ತಡ ಮಾಡಿದ ಹಿನ್ನೆಲೆ ಪ್ರಯೋಗಾಲಯಗಳಿಂದ 49,200 ದಂಡ ವಸೂಲಿ ಮಾಡಲಾಗಿದೆ. ಇನ್ನೂ 9.9 ಕೋಟಿ ದಂಡ ವಸೂಲಿ ಪ್ರಕ್ರಿಯೆ ಪರಿಶೀಲನೆ ಹಂತದಲ್ಲಿದೆ'' ಎಂದು ವಿವರ ನೀಡಿದೆ.