ಹೊಸದಿಲ್ಲಿ,ಜ.05 (DaijiworldNews/HR): ಕೊರೊನಾ ಲಸಿಕೆ ಬಳಕೆಗೆ ಅನುಮತಿ ದೊರೆತ ಸಂತೋಷದಲ್ಲಿ ದೇಶದ ಕುಸಿಯುತ್ತಿರುವ ಆರ್ಥಿಕತೆ ಹಾಗೂ ಲಡಾಖ್ನಲ್ಲಿ ಚೀನಾ ಕನಿಷ್ಠ 4,000 ಚದರ ಕಿ.ಮೀ ಭೂಭಾಗವನ್ನು ಕಬಳಿಸುತ್ತಿರುವುದನ್ನು ಜನರು ಮರೆಯಬಾರದು ಎಂದು ಹಿರಿಯ ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಈ ಕುರಿತು ಸ್ವಾಮಿ ಟ್ವೀಟ್ ಮಾಡಿರುವ ಅವರು, "ಕೊರೊನಾ ಲಸಿಕೆ ಬಳಕೆಗೆ ಅನುಮತಿ ದೊರೆತ ಸಂತೋಷದಲ್ಲಿ ದೇಶದ ಕುಸಿಯುತ್ತಿರುವ ಆರ್ಥಿಕತೆ ಹಾಗೂ ಲಡಾಖ್ನಲ್ಲಿ ಚೀನಾ ಕನಿಷ್ಠ 4,000 ಚದರ ಕಿ.ಮೀ ಭೂಭಾಗವನ್ನು ಕಬಳಿಸುತ್ತಿರುವುದನ್ನು ಜನರು ಎಂದಿಗೂ ಮರೆಯಬಾರದು" ಎಂದರು.
ಇನ್ನು ಭಾರತದ ಔಷಧಿ ನಿಯಂತ್ರಕ ಸಂಸ್ಥೆ ಸೀರಮ್ ಇನ್ಸ್ಟಿಟ್ಯೂಟ್ ತಯಾರಿಸಿರುವ ಆಕ್ಸ್ಫರ್ಡ್ ವಿವಿ-ಆಸ್ಟ್ರಾಝೆನಕಾ ಲಸಿಕೆ ಹಾಗೂ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆ ಬಳಕೆಗೆ ಅನುಮತಿ ದೊರೆತ ನಂತರ ಸುಬ್ರಮಣಿಯನ್ ಸ್ವಾಮಿ ಅವರು ಈ ಹೇಳಿಕೆ ನೀಡಿದ್ದಾರೆ.